

ಬೆಳ್ತಂಗಡಿ: ಪತ್ರಕರ್ತನ ಸೋಗಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ರೌಡಿಶೀಟರ್ ಪ್ರತೀಕ್ ಕೋಟ್ಯಾನ್ ಎಂಬಾತ ಬೆಳ್ತಂಗಡಿ ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮಾಡಿ ಆತನನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ ಅವರು ಆಗ್ರಹಿಸಿದ್ದಾರೆ.
ಮಂಗಳೂರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುzಶಿಸಿ ಅವರು ಮಾತನಾಡಿದರು.
ಸುದ್ದಿ ಬಿಡುಗಡೆ ಸಂಸ್ಥೆಯ ಬಗ್ಗೆ ಅಪಪ್ರಚಾರ: ಕಳೆದ ೪೦ ವರ್ಷಗಳಿಂದ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಬಿಡುಗಡೆ ಸಂಸ್ಥೆಯ ಬಗ್ಗೆ ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ಕೆಲವು ದಿನಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸುದ್ದಿ ಬಿಡುಗಡೆ ಸಂಸ್ಥೆಯ ಕುರಿತು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ದುರುzಶಪೂರ್ವಕವಾಗಿ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಮಾಡುತ್ತಿರುವ ಹೋರಾಟವನ್ನು ನಿಲ್ಲಿಸಲು ನಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದ ಯು.ಪಿ.ಶಿವಾನಂದರು, ನಮ್ಮಲ್ಲಿ ಏನೂ ಭ್ರಷ್ಟಾಚಾರ ನಡೆದಿಲ್ಲ, ಬೇಕಿದ್ದರೆ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಶಾಸಕ ಹರೀಶ್ ಪೂಂಜ ಹಾಗೂ ಅಪಪ್ರಚಾರ ಮಾಡುತ್ತಿರುವ ಪ್ರತೀಕನ ಆಪ್ತರಾಗಿರುವ ಮೋಹನ್ ಕುಮಾರ್ ಅವರನ್ನು ಕರೆದು ಅವರ ಸಮ್ಮುಖದಲ್ಲಿ ವಿಚಾರಿಸಬಹುದು ಎಂದು ಪಂಥಾಹ್ವಾನ ನೀಡಿದರೂ, ಪ್ರತೀಕ್ ಎಂಬಾತ ಅಸಭ್ಯವಾಗಿ ನಿಂದಿಸಿ, ಜೀವ ಬೆದರಿಕೆವೊಡ್ಡಿದ್ದಾನೆ ಮತ್ತು ತನ್ನ ಅಪಪ್ರಚಾರ ಮುಂದುವರಿಸಿದ್ದಾನೆ. ಈ ಅಪಪ್ರಚಾರ ಪೂಂಜ ಫ್ಯಾನ್ಸ್ ಕ್ಲಬ್ ಮತ್ತು ಧರ್ಮಸೇನೆ ಎಂಬ ಫೇಸ್‌ಬುಕ್ ಖಾತೆಯಲ್ಲಿ ವ್ಯಾಪಕವಾಗಿ ಹರಿದಾಡಿದೆ. ಅವನ ಈ ಅಪಪ್ರಚಾರದ ಹಿಂದೆ ವ್ಯವಸ್ಥಿತ ಜಾಲವಿದೆ ಎಂದು ತಿಳಿಸಿದರು.
ಈ ಪಿತೂರಿಯ ಹಿಂದೆ ಬೆಳ್ತಂಗಡಿ ತಾಲೂಕಿನ ಲಾಯಿಲ ನಿವಾಸಿ ಪ್ರತೀಕ್ ಕೋಟ್ಯಾನ್ ಎಂಬಾತ ಕಾರ್ಯ ನಿರ್ವಹಿಸುತ್ತಿದ್ದಾನೆ.ಕೊಲೆ ಪ್ರಕರಣ, ಅಕ್ರಮ ಕಲ್ಲುಗಾರಿಕೆ, ಬೆದರಿಕೆ, ಬ್ಲಾಕ್ಮೇಲ್ ಪ್ರಕರಣ ಸಹಿತ ಹಲವು ಕ್ರಿಮಿನಲ್ ಕೇಸುಗಳಲ್ಲಿ ಆರೋಪಿಯಾಗಿರುವ, ಕೊಲೆ ಕೇಸಿನಲ್ಲಿ ಆರೋಪಿಯಾಗಿರುವ ಮತ್ತು ರೌಡಿಶೀಟರ್ ಆಗಿರುವ ಪ್ರತೀಕ್ ಕೋಟ್ಯಾನ್ ಹಲವರನ್ನು ಬ್ಲಾಕ್ಮೇಲ್ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಪೊಲೀಸ್ ಇಲಾಖೆ, ಪತ್ರಕರ್ತರು ಸಹಿತ ಪ್ರಭಾವಿಗಳೊಂದಿಗೆ ಸೇರಿಕೊಂಡು ತಾನೋರ್ವ ಪ್ರಭಾವಿ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಈತ ಹಲವು ಗಣ್ಯ ವ್ಯಕ್ತಿಗಳು ಬೆಳ್ತಂಗಡಿ ತಾಲೂಕಿಗೆ ಬಂದಾಗಲೂ ಅವರ ಜತೆ ಕಾಣಿಸಿಕೊಳ್ಳುತ್ತಿದ್ದಾನೆ. ಭದ್ರತಾ ದೃಷ್ಟಿಯಿಂದಲೂ ಈತ ಈ ರೀತಿ ಸಾರ್ವಜನಿಕವಾಗಿ ಗಣ್ಯರೊಂದಿಗೆ ಕಾಣಿಸಿಕೊಳ್ಳುವುದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಪ್ರತೀಕ್ ಕೋಟ್ಯಾನ್‌ನನ್ನು ಬೆಳ್ತಂಗಡಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನಿಬಂಧಿಸುವುದರ ಜತೆಗೆ ದ.ಕ. ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದ ಡಾ. ಯು.ಪಿ. ಶಿವಾನಂದ ಅವರು ಪತ್ರಕರ್ತರ ಸೋಗಿನಲ್ಲಿ ಪ್ರತೀಕ್ ಕೋಟ್ಯಾನ್ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇತರ ಪತ್ರಕರ್ತರೊಂದಿಗೆ ಭಾಗವಹಿಸುವುದರಿಂದ ಪತ್ರಕರ್ತರು ಕೂಡ ರೌಡಿಶೀಟರ್ ಪ್ರತೀಕ್‌ನ ಕಾನೂನು ಬಾಹಿರ ಚಟುವಟಿಕೆಗಳಿಂದ ತೊಂದರೆಗೊಳಗಾಗಬಹುದು ಎಂಬ ಆತಂಕ ನಮ್ಮ ಪತ್ರಕರ್ತರಲ್ಲಿದೆ. ಆದುದರಿಂದ ರೌಡಿಶೀಟರ್, ಬ್ಲ್ಯಾಕ್‌ಮೇಲರ್ ಅಂತವರು ಪತ್ರಕರ್ತರ ಸೋಗಿನಲ್ಲಿ ಗುರುತಿಸಿಕೊಳ್ಳದಂತೆ ಪತ್ರಕರ್ತರು ಅಂತವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪೊಲೀಸರಿಂದ ಪ್ರತೀಕ್ ಕೋಟ್ಯಾನ್ ವಿಚಾರಣೆ: ಸುದ್ದಿ ಬಿಡುಗಡೆ ಸಂಸ್ಥೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಅಶ್ಲೀಲ ಸಂದೇಶ ರವಾನಿಸಿದ್ದಲ್ಲದೆ ಅಪಪ್ರಚಾರ ನಡೆಸಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಪ್ರತೀಕ್ ಕೋಟ್ಯಾನ್‌ನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಮಹಾ ಎಕ್ಸ್‌ಪ್ರೆಸ್ ಎಂಬ ಹೆಸರಿನ ವೆಬ್‌ಸೈಟ್ ನನ್ನದೇ ಎಂದು ಪ್ರತೀಕ್ ಕೋಟ್ಯಾನ್ ಹೇಳಿಕೊಂಡು ತಿರುಗಾಡುತ್ತಿದ್ದಾರೆಯಾದರೂ ಆ ವೆಬ್‌ಸೈಟ್ ಅವರದಲ್ಲ. ಮಹಾ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನ ಮಾಲಕರು ಬೆಳ್ತಂಗಡಿ ಮೂಲದವರಾಗಿದ್ದು ಪ್ರಸ್ತುತ ಮುಂಬೈಯಲ್ಲಿ ಉದ್ಯಮಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಪ್ರತೀಕ್‌ರ ಅವ್ಯವಹಾರ, ಬ್ಲ್ಯಾಕ್‌ಮೇಲ್, ರೌಡಿಸಂ ಗಮನಕ್ಕೆ ಬಂದಿರಲಿಕ್ಕಿಲ್ಲ. ಗೊತ್ತಿದ್ದರೆ ಅವರು ಕ್ರಮ ತೆಗೆದುಕೊಳ್ಳದೇ ಇರಲಿಕ್ಕಿಲ್ಲ ಎಂಬ ಅಭಿಪ್ರಾಯವಿದೆ. ಪ್ರತೀಕ್ ಕೋಟ್ಯಾನ್ ರೌಡಿ ಶೀಟರ್ ಆಗಿರುವ ವಿಚಾರ ಗೊತ್ತಿರುವ ಪತ್ರಕರ್ತರ ಸಂಘದವರು ಅವರಿಗೆ ಸದಸ್ಯತ್ವ ನೀಡಲು ನಿರಾಕರಿಸಿದ್ದಾರೆ. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘಕ್ಕೆ ಪ್ರತೀಕ್ ಕೋಟ್ಯಾನ್ ೨ ಬಾರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದ್ದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವರೂ ಪ್ರತೀಕ್ ಕೋಟ್ಯಾನ್ ಸದಸ್ಯತ್ವ ಕೇಳಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಪ್ರತೀಕ್ ಕೋಟ್ಯಾನ್‌ನಿಂದ ಸಾರ್ವಜನಿಕರಿಗೆ ಮತ್ತು ಪತ್ರಕರ್ತರಿಗೆ ತೊಂದರೆ ಆಗದಂತೆ ರಕ್ಷಣೆ ನೀಡಲು ದ.ಕ ಎಸ್.ಪಿ., ಬಂಟ್ವಾಳ ಡಿ.ವೈ.ಎಸ್.ಪಿ., ಪುತ್ತೂರು ಸಹಾಯಕ ಆಯುಕ್ತರು, ಬೆಳ್ತಂಗಡಿ ತಾ.ಪಂ. ಇ.ಓ, ತಹಶಿಲ್ದಾರ, ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮನವಿ ನೀಡಲಾಗಿದೆ.
ಡಿ.ಸಿ., ಎಸ್‌ಪಿಗೆ ಮನವಿ: ಪತ್ರಕರ್ತನ ಸೋಗಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ರೌಡಿಶೀಟರ್ ಪ್ರತೀಕ್ ಕೋಟ್ಯಾನ್ ಬೆಳ್ತಂಗಡಿ ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮಾಡಿ ಆತನನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ ಅವರು ದ.ಕ. ಜಿಲ್ಲಾಧಿಕಾರಿಯವರ ಕಚೇರಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಎಸ್‌ಪಿ ಯತೀಶ್ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.