

ಬೆಳ್ತಂಗಡಿ: ಮಾ. 31ರಂದು ಅಪರಾಹ್ನ ಜೆಸಿಐ ಬೆಳ್ತಂಗಡಿ ವತಿಯಿಂದ ತಾಲೂಕಿನ 5 ಸಾಧಕ ಮಹಿಳೆಯರಿಗೆ ಪಂಚರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಲಾೖಲ ಗ್ರಾಮದ ರಾಷ್ಟ್ರೀಯ ಅಥ್ಲೆಟಿಕ್ ಚಂದ್ರಿಕ, ತಾಲೂಕಿನ ನಾಟಿ ವೈದ್ಯೆ ಸುದರ್ಶನ, ಮಹಿಳಾ ಅಟೊ ಚಾಲಕಿ ಮಾದರಿ ಮಹಿಳೆ ಶಾಂತಿ ಪಾಯ್ಸ್, ಸಮಾಜ ಸೇವಕಿ ಉರಗ ರಕ್ಷಕಿ ಶೋಭ ಯಾನೆ ಆಶಾ ಕುಪ್ಪೆಟ್ಟಿ, ಕಿರಿಯ ವಯಸ್ಸಿನಲ್ಲಿ ರೆಸ್ಟೋರೆಂಟ್ ಉದ್ಯಮಕ್ಕೆ ಕಾಲಿಟ್ಟ ಯುವ ಉದ್ಯಮಿ ಶ್ರೇಯಾ ಶೆಟ್ಟಿ ಪಂಚತಾರ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ಅಬಕಾರಿ ಉಪ ವಿಭಾಗದ ಉಪ ವರಿಷ್ಠಾಧಿಕಾರಿ ಸೌಮ್ಯಲತಾ ಎನ್. ಇವರು ಸಾಧಕಿಯರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸಭೆಯನ್ನುದ್ದೇಶಿಸಿ ಮಹಿಳೆಯರಿಗೆ ಸಿಗುವ ಇಂದಿನ ಅವಕಾಶಗಳು ಹಾಗೂ ಸಾಧನೆಗೆ ಯಾವ ನೆಪಗಳು ಅಡ್ಡಿಯಲ್ಲ ಇಚ್ಛಾಶಕ್ತಿ ಒಂದಿದ್ದರೆ ಸಾಕು ಮಹಿಳೆ ಏನನ್ನೂ ಸಾಧಿಸಬಲ್ಲಳು ಎಂಬ ಅಭಿಪ್ರಾಯ ಪಟ್ಟರು. ಜೆಸಿಐ ಬೆಳ್ತಂಗಡಿಯ ಈ ಕಾರ್ಯಕ್ರಮವನ್ನು ಶ್ಲಾಘಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ಸವಿತಾ ಜಯದೇವ, ಬ್ಯೂಟಿ ಪಾರ್ಲರ್ ಅಸೊಶಿಯೇಶನ್ ಅಧ್ಯಕ್ಷೆ ರಶ್ಮಿತಾ ಆಳ್ವಾ, ಕಾರ್ಯಕ್ರಮ ಸಂಯೋಜಕಿ ಪವಿತ್ರ ಚಿದಾನಂದ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಭಾಧ್ಯಕ್ಷತೆ ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ವಹಿಸಿ ಕಾರ್ಯಕ್ರಮದ ಉದ್ದೇಶದ ಮಾಹಿತಿ ನೀಡಿದರು. ಮಹಿಳಾ ಜೇಸಿ ಸಂಯೋಜಕಿ ಜೇಸಿ ಚಿತ್ರಫ್ರಭ ಸಭೆಗೆ ಧನ್ಯವಾದವಿತ್ತರು. ಪೂರ್ವಾಧ್ಯಕ್ಷರು, ಎಲ್ಲಾ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.