

ಕರಾಯ: ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಜಯವಿಕ್ರಮ್ ಕಲ್ಲಾಪು, ಉಪಾದ್ಯಕ್ಷರಾಗಿ ಸೂರಪ್ಪ ಬಂಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸುಮಾರು 15 ಗ್ರಾಮಗಳಾದ ಕರಾಯ, ತಣ್ಣೀರುಪಂತ, ಬಾರ್ಯ, ಪುತ್ತಿಲ, ತೆಕ್ಕಾರು, ಮಚ್ಚಿನ, ಕಣಿಯೂರು, ಉರುವಾಲು, ಇಳಂತಿಲ, ಬಂದಾರು, ಮೊಗ್ರು, ಕಳಿಯ, ನ್ಯಾಯತರ್ಪು, ಓಡಿಲ್ನಾಳ, ಕೊಯ್ಯೂರು ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.
ಜಯವಿಕ್ರಮ್ ಪ್ರಸ್ತುತ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿ, ತಣ್ಣೀರುಪಂತ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಜೊತೆ ಕಾರ್ಯದರ್ಶಿಯಾಗಿ, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ, ತಣ್ಣೀರುಪಂತ ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರು, ಹಾಲಿ ಸದಸ್ಯರಾಗಿ ಹಲವಾರು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಉಪಾದ್ಯಕ್ಷರಾಗಿ ಆಯ್ಕೆಯಾದ ಸೂರಪ್ಪ ಬಂಗೇರ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆ ಗಳಲ್ಲಿ ಸೇವೆಗಯ್ಯುತ್ತಿದ್ದಾರೆ. ಆಡಳಿತ ಮಂಡಳಿ ನಿರ್ದೇಶಕರಾಗಿ ಸದಾನಂದ ಸಾಲ್ಯಾನ್ ಪೆದಮಲೆ, ಪ್ರಭಾಕರ ಸಾಲ್ಯಾನ್, ಸಂತೋಷ್ ಕುಮಾರ್ ಬೊಳೆಕ್ಕಿಲ, ಅಣ್ಣು ಪೂಜಾರಿ ಬಾಗ್ಲೋಡಿ, ಉಷಾ ಶರತ್, ಓಬಯ್ಯ ಪೂಜಾರಿ, ಹೇಮಂತ್ ಕುಮಾರ್ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯನ್ನು ಸಹಕಾರಿ ಸಂಘಗಳ ಸಿ. ಡಿ. ಒ .ಪ್ರತಿಮಾ ಬಿ. ವಿ. ಯವರು ನಡೆಸಿಕೊಟ್ಟರು.
2007 ಹಿರಿಯರಾದ ಜನಾರ್ದನ ಪೂಜಾರಿ ಗೇರುಕಟ್ಟೆ ಯವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಸಹಕಾರಿ ಸಂಘವು ಸುಮಾರು 18 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬರುತ್ತಿದೆ. ಪ್ರಸ್ತುತ ಸಾಲಿನಲ್ಲಿ ನಿರ್ದೇಶಕರನ್ನು ಅವಿರೋದವಾಗಿ ಆಯ್ಕೆಗೊಳಿಸುವಲ್ಲಿ ನಿಕಟ ಪೂರ್ವ ಅಧ್ಯಕ್ಷ ಜನಾರ್ದನ ಪೂಜಾರಿ ಸಹಕರಿಸಿದರು. ಸಂಘದ ಕಾರ್ಯನಿರ್ವಹಣಾದಿಕಾರಿ ಮಮತಾ, ಮಾಜಿ ನಿರ್ದೇಶಕ ರವೀಂದ್ರ ಬೊಳೋಡಿ, ಸಹಕಾರಿ ಸಂಘದ ಸಿಬಂಧಿಗಳು ಹಾಜರಿದ್ದರು.