

ಬೆಳ್ತಂಗಡಿ: ಸರಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ 8ನೇ ಮತ್ತು 9ನೇ ತರಗತಿಯ ಮಕ್ಕಳಿಗಾಗಿ 10ನೇ ತರಗತಿಯ ಪಠ್ಯಭಾಗ ‘ಕರ್ಣ ಭೇದನ ‘ವನ್ನು ಗಮಕಿ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ವಾಚನ ಮಾಡಿ ಪ್ರೊ. ಮಧೂರು ಮೋಹನ ಕಲ್ಲೂರಾಯ ವ್ಯಾಖ್ಯಾನ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ದ.ಕ ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ಮೋಹನ ಕಲ್ಲೂರಾಯರು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ತರಗತಿಯನ್ನು ತೆಗೆದುಕೊಂಡರು. ಕಾರ್ಯದಕ್ಷತೆ, ಶ್ರದ್ಧೆ, ಶ್ರಮ, ಗುರು ಹಿರಿಯರಲ್ಲಿ ಗೌರವ, ಒಳ್ಳೆಯ ವ್ಯಕ್ತಿತ್ವದ ನಡವಳಿಕೆ, ದೇಶಭಕ್ತಿ, ಪರೋಪಕಾರ ಮೊದಲಾದ ವಿಚಾರಗಳ ಬಗ್ಗೆ ದೃಷ್ಟಾಂತವನ್ನು ನೀಡಿ ಮಕ್ಕಳಿಗೆ ಸತ್ಪ್ರೇರಣೆ ನೀಡಿದರು. ಶಾಲಾ ಮುಖ್ಯಸ್ಥೆ ಪೂರ್ಣಿಮಾ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಕುಮುದ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಶಿಕ್ಷಕಿ ಪೂರ್ಣಿಮಾ ಕೆ. ಕೆ. ವಂದಿಸಿದರು.