

ಬೆಳ್ತಂಗಡಿ: ವಾಯ್ಸ್ ಆಫ್ ಬೆಳ್ತಂಗಡಿ ವಾಟ್ಸಪ್ಪ್ ಗ್ರೂಪ್ ವತಿಯಿಂದ ಮಾ.25ರಂದು ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿಯಲ್ಲಿ ಇಫ್ತಾರ್ ಮೀಟ್ ಕಾರ್ಯಕ್ರಮ ನಡೆಯಿತು. ವಾಯ್ಸ್ ಆಫ್ ಬೆಳ್ತಂಗಡಿ ವಾಟ್ಸಪ್ಪ್ ಡೈರೆಕ್ಟರ್ ಗಳಾದ ಇರ್ಫಾನ್ ಅಬುದಾಬಿ ಹಾಗೂ ಹೈದರ್ ಬಿ.ಕೆ ನೇತೃತ್ವದಲ್ಲಿ ಇಫ್ತಾರ್ ಕಾರ್ಯಕ್ರಮ ನಡೆಯಿತು.
ಖಿಲರ್ ಜುಮ್ಮಾ ಮಸೀದಿ ಅಧ್ಯಕ್ಷ ನಝೀರ್ ಬಿ. ಎ., ಮಸೀದಿ ಖತೀಬ ಹನೀಫ್ ಫೈಝಿ, ಎಸ್.ಡಿ.ಪಿ.ಐ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಹನೀಫ್ ಅಡ್ವೋಕೇಟ್, ಮೆಹಬೂಬ್ ಸಂಜಯನಗರ, ಅತಿಥಿಗಳಾಗಿ ಆಗಮಿಸಿದ್ದರು. ವಾಯ್ಸ್ ಆಫ್ ಬೆಳ್ತಂಗಡಿ ವಾಟ್ಸಪ್ಪ್ ಗ್ರೂಪ್ ಪದಾಧಿಕಾರಿಗಳು, ಜಮಾತ್ ಬಾಂಧವರು ಇಫ್ತಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.