ಬೆಳ್ತಂಗಡಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವೆಯೆ ನಮ್ಮ ಉಸಿರು ಎಂಬ ಧ್ಯೆಯ ವಾಕ್ಯವನ್ನು ಇಟ್ಟುಕೊಂಡು ಮುನ್ನುಗುತ್ತಿರುವ ವೀರಕೇಸರಿ ಬೆಳ್ತಂಗಡಿ ತಂಡದ 200ನೇ ಮಹತ್ವಕಾಂಕ್ಷಿ ಯೋಜನೆಯಾದ 8ನೇ ಮನೆಯನ್ನು ಉದಯ ಗುಡಿಗಾರ್ ಇವರಿಗೆ ಕಲ್ಮಂಜ ಗ್ರಾಮದ ಅಂತರಬೈಲು ಪಾದೆಮೇಲು ಎಂಬಲ್ಲಿ ನಿರ್ಮಿಸಿದ ಆಸರೆ ಮನೆಯನ್ನು ಗೃಹ ಪ್ರವೇಶದೊಂದಿಗೆ ಲೋಕಾರ್ಪಣೆಯು ಮಾ. 23ರಂದು ನಡೆಯಲಿದೆ.
ಶ್ರೀ ನಾಗಸಾಧು ತಪೋನಿಥಿ ಬಾಬಾ ಶ್ರೀವಿಠ್ಠಲ್ ಗಿರಿ ಜಿ ಮಹಾರಾಜ್ ಸ್ವಾಮಿಗಳ ಆಶೀರ್ವಚನದೊಂದಿಗೆ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ 8ನೇ ಆಸರೆ ಮನೆಯ ಹಸ್ತಾಂತರ ನಡೆಯಲಿದೆ. ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಕೆ. ಮೋಹನ ಕುಮಾರ್, ಸಹನ ಕುಂದರ್ ಸೂಡ, ಕಿರಣ್ ಚಂದ್ರ ಪುಷ್ಪಗಿರಿ, ಬಸವರಾಜ್ ಅಂಚೆ ಪಾಳ್ಯ , ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ ಮೊದಲಾದವವರು ಭಾಗವಹಿಸಲಿದ್ದಾರೆ ಎಂದು, ವೀರಕೇಸರಿ ಸಂಚಾಲಕ ಸತೀಶ್ ಶೆಟ್ಟಿ ತಿಳಿಸಿದ್ದಾರೆ.