ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶಿಕ್ಷಣ ಇಲಾಖೆಯ ಮುಂಡಾಜೆ ಹಾಗೂ ಅಣಿಯೂರು ಕಕ್ಕಿಂಜೆ ವಲಯದ ಸಿ.ಆರ್.ಪಿ ಯಾಗಿರುವ ಪ್ರಶಾಂತ್ ಪೂಜಾರಿ ಕಲ್ಮಂಜ 100ಮೀ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಖೋ ಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
