ಮಾ. 14-15 : ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ 56ನೇ ವರ್ಷದ ಏಕಾಹೋರಾತ್ರಿ ಭಜನೋತ್ಸವ

0

ನಾರಾವಿ: ಸುಮಾರು 56 ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಸೂರ್ಯನಾರಾಯಣ ಭಜನಾ ಮಂಡಳಿಯ ನೇತೃತ್ವದಲ್ಲಿ ಮಾ.14ರಿಂದ 15ರವರೆಗೆ ಏಕಾಹೋರಾತ್ರಿ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ದೇವಸ್ಥಾನದಿಂದ ಅರಸುಕಟ್ಟೆಯ ಅಶ್ವಥ್ಥಕಟ್ಟೆಯವರೆಗೆ ವಿಜೃಂಭಣೆಯ ನಗರ ಭಜನಾ ಸಂಕೀರ್ತನೆ ಸಾಗಿ ಬರಲಿದ್ದು, ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಸ್ತಬ್ಧ ಚಿತ್ರಗಳು, ಚೆಂಡೆ-ವಾದ್ಯ, ವಾಲಗ ಹಾಗೂ ಕೀಲು ಕುದುರೆಗಳ ಬಳಗದೊಂದಿಗೆ 5 ಭಜನಾ ತಂಡಗಳು ಪಾಲ್ಗೊಳ್ಳಲಿದೆ. ಎಂದು ನಾರಾವಿ ಶ್ರೀ ಸೂರ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ ಪೂಜಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here