ಹೊಸಂಗಡಿ: ಮಾ. 12ರಂದು ಸಂಜೆ ಮತ್ತು ರಾತ್ರಿ ಸುರಿದ ಗಾಳಿ ಮಳೆಗೆ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾನಿಗೊಂಡ ಮನೆಗಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ಪಿಡಿಒ ಮತ್ತು ಗ್ರಾಮ ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಮಾ. 13 ರಂದು ಭೇಟಿ ನೀಡಿ ಪರಿಶೀಲಿಸಿದರು.

ಹೊಸಂಗಡಿ ಗ್ರಾಮದ ಪ್ರೇಮ ಸದಾನಂದ, ಸುಧಾಕರ, ಡೀಕಯ್ಯ,ಸುಂದರಿ, ಜಿನ್ನಪ್ಪ ಪೂಜಾರಿ, ಶರತ್,ಸುಣ್ಣತ್ ಸಾಹೇಬ್, ಬದ್ರುನ್ನಿಶ, ದಿನೇಶ್ ಪೂಜಾರಿ, ಪ್ರದೀಪ್, ವಿಠಲ್ ಪೂಜಾರಿ , ಲಕ್ಷ್ಮಿಯವರ ಮನೆಗಳಿಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ಅಲ್ಲದೆ ಹಲವಾರು ತೋಟಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ಬಿದ್ದಿದೆ.

ಪಡ್ಯರಬೆಟ್ಟ ಮತ್ತು ಅಂಗಡಿ ಬೆಟ್ಟು ರಾಜ್ಯ ಹೆದ್ದಾರಿಗೆ ಮರಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚನೆಯಾಗಿದ್ದು ಪಂಚಾಯತ್ ಅಧ್ಯಕ್ಷ ರ ಮುಂದಾಳತ್ವದಲ್ಲಿ ಸ್ಥಳೀಯ ಸಹಕಾರದೊಂಗೆ ತುರ್ತು ತೆರವು ಕಾರ್ಯವನ್ನು ನಡೆಸಲಾಯಿತು. ಪಂಚಾಯತ್ ನ ಹಳೆಯ ಕಟ್ಟಡ ಚಾವಣಿಗೂ ಹಾನಿಯಾಗಿದ್ದು ತುರ್ತು ದುರಸ್ತಿಗೊಳಿಸಲಾಗುತ್ತಿದೆ.