ನಾರಾವಿ: ಸೈಂಟ್ ಜೋಸೆಫ್ ಯುನಿವರ್ಸಿಟಿ ಬೆಂಗಳೂರಿನಲ್ಲಿ ಆಯೋಜಿಸಲ್ಪಟ್ಟ ರಾಷ್ಟ್ರೀಯ ಮಟ್ಟದ ರಸಾಯನಶಾಸ್ತ್ರ ಸಮ್ಮೇಳನದಲ್ಲಿ ಪ್ರಿಮಲ್ ನಿಶ್ಮಾ ರೊಡ್ರಿಗಸ್ ಕೆಮಿಕಲ್ ಸೈನ್ಸ್ ಸ್ ಫಾರ್ ಎ ಸಸ್ಟೈನೆಬಲ್ ಟುಮಾರೊ:ಸಿನರ್ಜಿ ಆಂಡ್ ಸೊಲ್ಯೂಷನ್ಸ್ ವಿಷಯದ ಕುರಿತು ಸಂಶೋಧನಾ ಲೇಖನ ಮಂಡಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಬೆಂಗಳೂರು ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಎಂ.ಎಸ್.ಸಿ ಸ್ನಾತಕೋತ್ತರ ಪರೀಕ್ಷೆಯ ಅನಾಲಿಟಿಕಲ್ ಕೆಮಿಸ್ಟ್ರಿ ವಿಭಾಗದಲ್ಲಿ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದು ಸಾಧನೆಗೈದಿರುವ ಇವರು ನಾರಾವಿ ನಿವಾಸಿಯ ಹೊಸ್ಮಾರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಹ ಶಿಕ್ಷಕಿ ಮಾರ್ಗರೆಟ್ ಪಿಂಟೋ ಹಾಗೂ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು ಮಡಂತ್ಯಾರಿನ ಇತಿಹಾಸ ವಿಭಾಗದ ಉಪನ್ಯಾಸಕ ವಿನ್ಸೆಂಟ್ ರೊಡ್ರಿಗಸ್ ದಂಪತಿಗಳ ಸುಪುತ್ರಿಯಾಗಿರುತ್ತಾರೆ.