ಚಾರ್ಮಾಡಿ: ಗ್ರಾಮದ ಜಿ. ಕೆ ಮನೆ ನಿವಾಸಿ ಅಹ್ಮದ್ ಕುಂಜಿ (71) ಇವರು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಮಾ. 3ರಂದು ಅನಾರೋಗ್ಯ ಕಾಣಿಸಿಕೊಂಡು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಇವರು ಮಾಜಿ ಚಾರ್ಮಾಡಿ ಗ್ರಾ. ಪಂ ಸದಸ್ಯ ಹಾಗೂ ಕಕ್ಕಿಂಜೆಯ ಹಿರಿಯ ಮೀನು ವ್ಯಾಪಾರಿಯು ಆಗಿದ್ದರು.
ರಿಯಾದ್ ನಲ್ಲಿರುವ ತನ್ನ ಪುತ್ರ ಫಾರೂಕ್ ಅವರ ಮನೆಯಲ್ಲಿ ನೆಲೆಸಿ 3 ದಿನಗಳ ಹಿಂದೆ ಒಂದು ಹಂತದ ಉಮ್ರಾ ಯಾತ್ರೆ ಮುಗಿಸಿ ಮಾ. 3ರಂದೇ ಎರಡನೇ ಹಂತದ ಉಮ್ರಾ ಪರ್ಯಟನೆ ಉದ್ದೇಶಿದ್ದರು.
ಮೃತರು ಮಕ್ಕಳಾದ ಸಿದ್ದೀಕ್, ನಝೀರ್, ರಶೀದ್, ಅಶ್ರಫ್, ಹಕೀಮ್, ಫಾರೂಕ್, ಹಂಝ (ಜಲೀಲ್), ಫಹೀದ್, ಝೀನತ್, ಆಯಿಶಾ ಮತ್ತು ಸಾಜಿದಾರವರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಮೆಕ್ಕಾದಲ್ಲೇ ಭಾರತೀಯ ಕಾಲಮಾನ ರಾತ್ರಿ 9.00ಕ್ಕೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.