ಮುರ್ಶಿದ್ ಅಹ್ಮದ್ ಕುಪ್ಪೆಟ್ಟಿ ವಿಶ್ವದಾಖಲೆ – 18ನೇ ವಯಸ್ಸಿನಲ್ಲಿ 366 ದಿನಗಳ ನಿತ್ಯ ವಿಡಿಯೋ ಚಾಲೆಂಜ್ ಪೂರ್ಣಗೊಳಿಸಿದ ಪ್ರಥಮ ವ್ಯಕ್ತಿ

0

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ದಾರುನ್ನೂರ್ ಶಿಕ್ಷಣ ಕೇಂದ್ರ, 18 ವಷದ ವಿದ್ಯಾರ್ಥಿ ಮುರ್ಶಿದ್ ಅಹ್ಮದ್ ಕುಪ್ಪೆಟ್ಟಿ 366 ದಿನಗಳ ನಿರಂತರ ನಿತ್ಯ ವಿಡಿಯೋ ಚಾಲೆಂಜ್‌ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ವಿಶ್ವದಾಖಲೆ ಬರೆದಿದ್ದಾರೆ.

2023ರ ನ. 1ರಿಂದ 2024ರ ಅ. 31ರವರೆಗೆ, ಪ್ರತಿದಿನವೂ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರಪಂಚದ ಪ್ರಮುಖ ದಿನಗಳ ಬಗ್ಗೆ ಮಾಹಿತಿಯುಕ್ತ ವೀಡಿಯೋಗಳನ್ನು ಹಂಚಿಕೊಂಡು ಯುವ ಪ್ರತಿಭೆಗಳಿಗೆ ಹೊಸ ಪ್ರೇರಣೆ ನೀಡಿದ್ದಾರೆ.

ಇದು ಶಿಕ್ಷಣ, ನಿರಂತರ ಶ್ರಮ ಮತ್ತು ಸೃಜನಶೀಲತೆಗೆ ಒಳ್ಳೆಯ ಉದಾಹರಣೆಯಾಗಿದ್ದು, ಡಿಜಿಟಲ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲಾಗಿದೆ.

ಪ್ರತಿದಿನ ಹೊಸ ವಿಷಯ: 366 ದಿನಗಳಲ್ಲಿ ಪ್ರತಿದಿನ ಹೊಸ ವಿಷಯ ಸಂಶೋಧನೆ, ಚಿತ್ರೀಕರಣ, ಎಡಿಟಿಂಗ್ ಮತ್ತು ಪ್ರಕಟಣೆ ಮಾಡಲಾಗಿದೆ. ಜ್ಞಾನ ಹಂಚಿಕೆ ಮತ್ತು ವಿಶ್ವದ ಪ್ರಮುಖ ದಿನಗಳ ಅರಿವು ಮೂಡಿಸುವ ಉದ್ದೇಶ ಈ ಸಾಧನೆ ಹಿಂದಿದೆ.

ಈ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಈಗಾಗಲೇ ಅಧಿಕೃತವಾಗಿ ಗುರುತಿಸಿವೆ. ಜೊತೆಗೆ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಲಿಖಿತ ದಾಖಲೆಗೆ ಒಳಪಡುವ ನಿರೀಕ್ಷೆಯಲ್ಲಿದೆ.

ಗಿನ್ನಿಸ್ ದಾಖಲೆಗೆ ಪ್ರಸ್ತಾವಿತ ವಿಭಾಗಗಳು: “366 ದಿನಗಳ ಕಾಲ ಪ್ರತಿದಿನ ನಿರಂತರ ವಿಡಿಯೋ ಪ್ರಕಟಿಸಿದ ಪ್ರಥಮ ವ್ಯಕ್ತಿ” “ನಿತ್ಯದ ವಿಶೇಷ ದಿನಗಳ ಬಗ್ಗೆ ನಿರಂತರ ವಿಡಿಯೋ ಸೃಷ್ಟಿಸಿದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ.”

ಕಠಿಣ ಪರಿಶ್ರಮವೇ ಕಾರಣ: ನಿತ್ಯ ಹೊಸ ವಿಷಯ ಕಂಡುಹಿಡಿಯುವುದು, ಅದನ್ನು ಚಿತ್ರೀಕರಿಸಿ ಸಂಪಾದಿಸುವುದು, ಆನಂತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟಿಸುವುದು. ಈ ಎಲ್ಲಾ ಕಾರ್ಯವನ್ನು366 ದಿನಗಳ ಕಾಲ ಯಾವುದೇ ವಿರಾಮವಿಲ್ಲದೆ ನಡೆಸುವುದು ದೊಡ್ಡ ಸವಾಲಾಗಿತ್ತು. ಆದರೆ, ಮುರ್ಶಿದ್ ತಮ್ಮ ಶಿಸ್ತು, ಸಹನಶೀಲತೆ, ಮತ್ತು ದುಡಿಮೆಯಿಂದ ಈ ಸಾಧನೆ ಮಾಡಿದ್ದಾರೆ.

ಯುವಕರಿಗೆ ಸ್ಫೂತಿ: ಮುರ್ಶಿದ್ ಅಹ್ಮದ್ ಕುಪ್ಪೆಟ್ಟಿ ಅವರ ಈ ದಾಖಲೆ ಕೇವಲ ವೈಯಕ್ತಿಕ ಗೆಲುವಲ್ಲ; ಯುವಜನತೆಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಶಿಕ್ಷಣ ಮತ್ತು ಜ್ಞಾನ ಹಂಚಿಕೆಗೆ ಬಳಸುವಂತೆ ಪ್ರೇರೇಪಿಸುವ ಉದಾಹರಣೆಯೂ ಹೌದು.
ಮುರ್ಶಿದ್ ಅಹ್ಮದ್ ಕುಪ್ಪೆಟ್ಟಿ ವಿಡಿಯೋ ನೋಡಲು: -YouTube: Murshid Days-Instagram: Murshid Days ಪೇಜ್‌ಗೆ ಭೇಟಿ ಕೊಡಬಹುದು.

LEAVE A REPLY

Please enter your comment!
Please enter your name here