ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಸರ್ಕಲ್ ಸಮಿತಿ ರಚನೆ

0

ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾತ್ ಉಜಿರೆ ಸರ್ಕಲ್ ಸಮಿತಿಯ ಮಹಾಸಭೆಯು ಉಜಿರೆ ಬದ್ರುಲ್ ಹುದಾ ಮದರಸದಲ್ಲಿ ಜರುಗಿತು. ಈ ವೇಳೆ ಮುಂದಿನ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಹಾಜಿ ಹೈದರ್ ಮದನಿ ಉಜಿರೆ, ಕಾರ್ಯದರ್ಶಿಯಾಗಿ ಖಾಲಿದ್ ಮುಸ್ಲಿಯಾರ್ ಬುಸ್ತಾನಿ, ಕೋಶಾಧಿಕಾರಿಯಾಗಿ ಹಂಝ ಬಿ. ಎ. ಮಾಚಾರು, ಉಪಾಧ್ಯಕ್ಷರಾಗಿ ಹಾಜಿ ಉಮರ್ ಕುಂಜಿ, ದ‌ಅವಾ ಕಾರ್ಯದರ್ಶಿಯಾಗಿ ಹನೀಫ್ ಮುಸ್ಲಿಯಾರ್, ಮೀಡಿಯಾ ಕಾರ್ಯದರ್ಶಿಯಾಗಿ ರಝಾಕ್ ಫುರ್ಖಾನಿ ನಿಡಿಗಲ್, ಇಸಾಬ ಕಾರ್ಯದರ್ಶಿಯಾಗಿ ಇಬ್ರಾಹಿಂ ಹಾಜಿ ಅತ್ತಾಜೆ, ಸಹಾಯಿ ಕಾರ್ಯದರ್ಶಿಯಾಗಿ ರಝಾಕ್ ಮಾಚಾರು, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಹಮೀದ್ ಗಾಂಧಿನಗರ, ಸಂಘಟನಾ ಕಾರ್ಯದರ್ಶಿಯಾಗಿ ಎಸ್ ಅಬೂಬಕರ್ ಕಕ್ಕೇನಾ ಆಯ್ಕೆಯಾದರು.

ಅಲ್ಲದೆ 11 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಆರಿಸಲಾಯಿತು . ಎಸ್. ಎಮ್. ಕೋಯಾ ತಂಙಳ್ ಉಜಿರೆ, ಮಯದ್ದಿ ಕುಂಟಿನಿ, ಉಸ್ತಾದ್ ಯಾಸಿರ್ ಫುರ್ಖಾನಿ ಉಪಸ್ಥಿತರಿದ್ದರು.
ಚುನಾವಣಾ ವೀಕ್ಷಕ ಇಬ್ರಾಹಿಂ ಕಕ್ಕಿಂಜೆಯವರು ನೇತೃತ್ವ ವಹಿಸಿದರು.

LEAVE A REPLY

Please enter your comment!
Please enter your name here