ಬೆಳ್ತಂಗಡಿ: ಧರ್ಮಸ್ಥಳ ಪೋಲಿಸ್ ರಾಣಾ ವ್ಯಾಪ್ತಿಯ ಕಾಯರ್ತಡ್ಕ ಕಳೆಂಜ ಗಾಳಿತೋಟ ಎಂಬಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡಿರುವ ಘಟನೆ ಫೆ. 20 ರಂದು ಮಧ್ಯಾಹ್ನ ನಡೆದಿದೆ.

ಭಜರಂಗದಳ ಹಾಗೂ ಹಿಂದೂ ಕಾರ್ಯಕರ್ತರ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಆಟೋ ರಿಕ್ಷಾ ಮತ್ತು ಗೋವನ್ನು ವಶಪಡಿಸಿಕೊಂಡು, ಗೋವನ್ನು ಕಳೆಂಜ ಗೋ ಶಾಲೆಗೆ ಒಪ್ಪಿಸಲಾಗಿದೆ.
ಈ ಪ್ರಕರಣದಲ್ಲಿ ಲಾಲು ವರ್ಕಿ ಮತ್ತು ಇರ್ಫಾನ್ ಇಬ್ಬರನ್ನೂ ಧರ್ಮಸ್ಥಳ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.