ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸೇತುವೆಯ ಬಳಿ ಅಪರಿಚಿತ ಶವ ಫೆ.19ರಂದು ಪತ್ತೆಯಾಗಿದೆ.
ಸುಮಾರು 55 ವರ್ಷ ವಯಸ್ಸಿನ ಗಂಡಸು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ನೇತ್ರಾವತಿ ಸಮೀಪದ ಸ್ಥಳೀಯರು ಶವ ನದಿಯಲ್ಲಿ ಬರುವುದನ್ನು ಕಂಡು ತಕ್ಷಣ ಧರ್ಮಸ್ಥಳ ಠಾಣಾ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.