ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಫೆ. 9ರಂದು ಗ್ರಾಹಕ ಸೇವೆ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರ ಸಂಘದ ಅಟಲ್ ಜಿ ಸಭಾ ಭವನದಲ್ಲಿ ನಡೆಯಿತು. ಸಂಘದ ಮಾಜಿ ಅಧ್ಯಕ್ಷರುಗಳಾದ ಬಿ. ಭುಜಬಲಿ, ರತ್ನವರ್ಮ ಜೈನ್, ಎಂ. ಜಯರಾಮ ಭಂಡಾರಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರೀತಮ್ ಡಿ. ವಹಿಸಿದ್ದರು. ಮಂಗಳೂರು ಮಾಸ್ಟರ್ ಮೈಂಡ್ ಎಂಟರ್ ಪ್ರೈಸಸ್ ನ ಶ್ರೀಶ ಕೆ. ಎಂ., ಭರತ್ ಸಂಘದ ಸಿಬ್ಬಂದಿಗಳಿಗೆ ತರಬೇತಿ ನೀಡಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ, ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಶಾಂಭವಿ ರೈ, ಉಮಾನಾಥ್, ಶೀನ, ಧನಲಕ್ಷ್ಮೀ, ಪ್ರಭಾಕರ ಗೌಡ, ಬಿ., ಪ್ರಸನ್ನ ಹೆಬ್ಬಾರ್, ನೀಲಾಧರ ಶೆಟ್ಟಿ, ವಿಕ್ರಮ್, ಚಂದ್ರಶೇಖರ್, ತಂಗಚ್ಚನ್ ಎನ್ . ಪಿ., ಸಿಬ್ಬಂದಿಗಳು ಹಾಜರಿದ್ದರು. ಎ. ಎಸ್. ಲೋಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.