ಗರ್ಡಾಡಿ: ಪೇರಡ್ಕ ಶ್ರೀ ಸದಾಶಿವ ದೇವಸ್ಥಾನ, ಗ್ರಾಮದೇವರ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ. 9 ರಿಂದ 13ರವರೆಗೆ ಜರಗಲಿರುವುದು.
ಫೆ. 9ರಂದು ಪೂರ್ವಾಹ್ನ ಘಂಟೆ 10-00ರಿಂದ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗರ್ಡಾಡಿ ಸಹಕಾರದೊಂದಿಗೆ ವರ್ಷಂಪ್ರತಿ ಜರಗುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಘಂಟೆ 11-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ.
ಪ್ರಾತಃ ಕಾಲ ಘಂಟೆ 7ರಿಂದ ಸ್ವಸ್ತಿ ಪುಣ್ಯಾಹವಾಚನ ಪಂಚವಿಂಶತಿದ್ರವ್ಯ ಕಲಶಾರಾಧನೆ. ಅಧಿವಾಸ ಹೋಮ, ಶತರುದ್ರಾಭಿಷೇಕ ಮಹಾಪೂಜೆ, ಮಧ್ಯಾಹ್ನ ಘಂಟೆ 12-30 ಕ್ಕೆ ಧ್ವಜಾರೋಹಣ, ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆ ಸಂಜೆ ಭಜನಾ ಕಾರ್ಯಕ್ರಮ.
ಫೆ. 10ರಂದು ಕಲಶಾರಾಧನೆ, ಕಲಶಾಭಿಷೇಕ, ಮಹಾಪೂಜೆ, ನಿತ್ಯ ಬಲಿ, ಅನ್ನಸಂತರ್ಪಣೆ ಸಂಜೆ ಘಂಟೆ 6-00 ರಿಂದ ಮಹಾರಂಗಪೂಜೆ, ಉತ್ಸವ ಬಲಿ.
ಫೆ. 11ರಂದು ದುರ್ಗಾ ಹೋಮ, ಮಹಾಪೂಜೆ, ಅನ್ನಸಂತರ್ಪಣೆ ಸಂಜೆ ಭಜನಾ ಕಾರ್ಯಕ್ರಮ. ರಾತ್ರಿ ಶ್ರೀ ಭೂತಬಲಿ ಕವಾಟ ಬಂಧನ.
ಫೆ. 12ರಂದು ಕವಾಟೋದ್ಘಾಟನೆ, ಮಹಾಪೂಜೆ, ಚೂರ್ಣೋತ್ಸವ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ. ಅಪರಾಹ್ನ ಗಂಟೆ 2ರಿಂದ ದೈವಗಳ ಭಂಡಾರ ಇಳಿದು ನೇಮೋತ್ಸವ ಸಂಜೆ ಭಜನಾ ಕಾರ್ಯಕ್ರಮ. ರಾತ್ರಿ ಘಂಟೆ 6-00ರಿಂದ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ, ಅವಕೃತ, ದೈವ ದೇವರು ಭೇಟಿ, ಧ್ವಜಾವರೋಹಣ.
ಫೆ. 13ರಂದು ಸಂಪ್ರೋಕ್ಷಣೆ ನಡೆಯಲಿದೆ.