ಪೋಷಕರ ಸಭೆ ಮತ್ತು ಆಪ್ತಸಮಾಲೋಚನಾ ಕಾರ್ಯಕ್ರಮ

0

ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಫೆ. 1ರಂದು ಪೋಷಕರ ಸಭೆ ಮತ್ತು ಆಪ್ತಸಮಾಲೋಚನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ವೇದಿಕೆಯಲ್ಲಿದ್ದ ಸಂಸ್ಥೆಯ ಸಂಚಾಲಕರು ಹಾಗೂ ನಿರ್ದೇಶಕರು ಆದ ಫಾ. ವಿನೋದ್ ಮಸ್ಕರೇನ್ಹಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪೋಷಕರು ಮಕ್ಕಳ ಅಂಗವಿಕಲತೆಯ ಬಗ್ಗೆ ಅರಿತುಕೊಂಡಿರಬೇಕು. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೋಷಕರು ಪ್ರೋತ್ಸಾಹವನ್ನು ನೀಡುವುದು, ಅವರ ಮುಂದಿನ ಭವಿಷ್ಯದ ಕಡೆಗೆ ಗಮನಹರಿಸುವುದು, ಮುಂದಿನ ದಿನಗಳಲ್ಲಿ ಶಾಲೆಯ ಶಾಲಾ ವಾರ್ಷಿಕೋತ್ಸವವನ್ನು ಆಚರಿಸುವ ಬಗ್ಗೆ ಚರ್ಚಿಸಲಾಯಿತು.

ಹಾಗೆಯೇ ಡಿಸೆಂಬರ್ ತಿಂಗಳಿನಲ್ಲಿ ದಯಾ ವಿಶೇಷ ಶಾಲೆಯ ವಿಶೇಷ ಮಕ್ಕಳ ಜೀವನೋಪಾಯಕ್ಕಾಗಿ ನಡೆಸಲಾದ “ದಯಾ ಫಿಯೆಸ್ತಾ 2024” ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲಾ ಪೋಷಕರನ್ನು ಅಭಿನಂದಿಸಿದರು. ಸಂಸ್ಥೆಯಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಕರಕುಶಲ ತರಬೇತಿಗಳನ್ನು ಪೋಷಕರು ಕಲಿತುಕೊಂಡು ಮನೆಯಲ್ಲಿ ಬಿಡುವಿನ ಸಮಯದಲ್ಲಿ ಅವನ್ನು ತಯಾರಿಸಿ ಇದರ ಲಾಭವನ್ನು ಪಡೆಯಬಹುದು. ಹಾಗೂ ಮಕ್ಕಳೊಂದಿಗೆ ಈ ಸ್ವ-ಉದ್ಯೋಗವನ್ನು ಮಾಡುತ್ತಿದ್ದರೆ ಅವರಿಗೂ ಉತ್ತೇಜನ, ಪ್ರೇರಣೆ ನೀಡಿದಂತಾಗುತ್ತದೆ.

ಮಕ್ಕಳ ಅಭಿವೃದ್ದಿಗೆ ಒಂದು ಪೂರಕ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಂತಾಗುವುದು ಹಾಗೂ ಈ ಕರಕುಶಲ ವಸ್ತುಗಳ ತಯಾರಿಕೆಗೆ ಅಗತ್ಯಬಿಳುವ ಸಾಮಗ್ರಿಗಳನ್ನು ಸಂಸ್ಥೆಯೇ ಒದಗಿಸಿಕೊಡುವುದು. ಈ ನಿಟ್ಟಿನಲ್ಲಿ ಎಲ್ಲಾ ಪೋಷಕರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ತದನಂತರ ಪೋಷಕರಿಗೆ ಆಪ್ತಸಮಾಲೋಚನಾ ಕಾರ್ಯಕ್ರಮವನ್ನು ಮೆರಿನ್ ನೆರವೇರಿಸಿಕೊಟ್ಟರು.

ಮಕ್ಕಳ ವಿವಿಧ ಅಂಗವೈಕಲ್ಯತೆಯ ಪ್ರಕಾರಗಳು ಹಾಗೂ ಅದರ ನಿಭಾಯಿಸುವ ಬಗ್ಗೆ ತಿಳಿಸಿಕೊಡಲಾಯಿತು. ತದನಂತರ ಮುಖ್ಯಶಿಕ್ಷಕರು ಹಾಗೂ ತರಗತಿ ಶಿಕ್ಷಕರು ಪೋಷಕರೊಂದಿಗೆ ಮಕ್ಕಳ ಪ್ರಗತಿಯ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಈ ಕಾರ್ಯಕ್ರಮವನ್ನು ಶಿಕ್ಷಕ ರಮೇಶ್ ಹೆಚ್. ಕೆ. ನಿರೂಪಿಸಿ, ಸರ್ವರನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ದಿವ್ಯ ಟಿ. ವಿ. ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here