ಬೆಳ್ತಂಗಡಿ: ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ನೋಟರಿ ಪಬ್ಲಿಕ್ ಭಗೀರಥ ಜಿ. ರವರ ಕಚೇರಿ ಸ್ಥಳಾಂತರಗೊಂಡು ಬೆಳ್ತಂಗಡಿ ಶ್ರೀ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಫೆ.3 ರಂದು ಉದ್ಘಾಟನೆಗೊಂಡಿತು.
![](https://belthangady.suddinews.com/wp-content/uploads/2025/02/2-3.jpg)
ಮೇಲಂತಬೆಟ್ಟು ಶ್ರೀ ಭಗವತಿ ಕ್ಷೇತ್ರದ ಧರ್ಮದರ್ಶಿ ಯೋಗೀಶ್ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ, ನ್ಯಾಯವಾದಿ ಬಿ. ಕೆ. ಧನಂಜಯ ರಾವ್, ಪೆರಾಡಿ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಕಾಶಿಪಟ್ಟ, ಗುರುದೇವ ವಿವಿದೊದ್ಧೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್, ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು, ಕೆ. ಡಿ. ಪಿ ಸದಸ್ಯ ಸಂತೋಷ್ ಕುಮಾರ್, ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಪೀತಾಂಬರ ಹೆರಾಜೆ, ಪೆರಾಡಿ ಸಿ.ಎ ಬ್ಯಾಂಕಿನ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಕ್ ಲತೀಫ್, ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಇಲಂತಿಲ, ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಉಪ್ಪಿನಂಗಡಿ ದಂತ ವೈದ್ಯ ಡಾ. ರಾಜಾರಾಮ ಕೆ. ಬಿ., ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ಲಕ್ಕ, ಹರಿದಾಸ ಕೇದೆ, ಚಿದಾನಂದ ಇಡ್ಯಾ, ವಸಂತ ಶೆಟ್ಟಿ ಶ್ರದ್ಧಾ, ತಾ. ಪಂ. ಸಂಯೋಜಕ ಜಯಾನಂದ ಲಾಯಿಲ, ರಮೇಶ್ ಪೂಜಾರಿ, ಮೊದಲದವರು ಉಪಸ್ಥಿತರಿದ್ದರು.
![](https://belthangady.suddinews.com/wp-content/uploads/2025/02/3-4.jpg)
ಆಗಮಿಸಿದ ಅತಿಥಿ ಗಣ್ಯರನ್ನು ನ್ಯಾಯವಾದಿ ಭಗೀರಥ ಜಿ., ಸುಕನ್ಯಾ ಭಗೀರಥ, ಸುಜನ್, ಸುಧೀಕ್ಷಾ ಸ್ವಾಗತಿಸಿ, ಸತ್ಕರಿಸಿದರು.