ಉಜಿರೆ: ಶ್ರೀ ಧ. ಮಂ. ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯದಲ್ಲಿ ಡೀನ್ ಮತ್ತು ಉಪಪ್ರಾಂಶುಪಾಲರಾಗಿರುವ ಡಾ. ಸುಜಾತ ದಿನೇಶ್ ರವರು ಸಲ್ಲಿಸಿದ “ಯೂಸ್ ಆಫ್ ಇಂಟೆಗ್ರೇಟೆಡ್ ಯೋಗ ಆಂಡ್ ನ್ಯಾಚುರೋಪತಿ ಇಂಟರ್ವೆಂಷನ್ ಟು ಇಂಪ್ರೂವ್ ಅಟೊನೋಮಿಕ್ ಡಿಸ್ ಫಂಕ್ಷನ್, ಫಂಕ್ಷನಲ್ ಡಿಸ್ಸೇಬಿಲಿಟಿ ಆಂಡ್ ಕ್ವಾಲಿಟಿ ಆಫ್ ಲೈಫ್ ಇನ್ ಪೇಷಂಟ್ಸ್ ವಿದ್ ಸ್ಪೈನಲ್ ಕೋ ರ್ಡ್ ಇಂಜ್ಯುರಿ “ಎಂಬ ಮಹಾಪ್ರಬಂಧಕ್ಕೆ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಡೀಮ್ಡ್ ಟುಬಿ ಯೂನಿವರ್ಸಿಟಿ ಪಿ. ಹೆಚ್. ಡಿ ಪದವಿ ಪ್ರಧಾನ ಮಾಡಿದೆ.
ಇದೇ ವಿ. ವಿ. ಯ ಉಪಕುಲಪತಿ ಮಂಜುನಾಥ್ ಎನ್. ಕೆ.,ರವರಿಗೆ ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದರು. ಅವರು ಉಜಿರೆಯ ಪಶುವೈದ್ಯ ಡಾ. ದಿನೇಶ್ ಎನ್. ಸರಳಾಯರ ಪತ್ನಿ ಹಾಗು ಧರ್ಮಸ್ಥಳ ಶಾಂತಿವನದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಹಿರಿಯ ವೈದ್ಯೆಯಾಗಿ ಹಾಗೂ ಪ್ರಕೃತಿ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.