ಧರ್ಮಸ್ಥಳ: ಪಾಂಗಳ ನಿವಾಸಿ ಅಪ್ಪು ಮಣಿಯಾಣಿ (68) ಜ. 26 ರಂದು ಹೃದಯಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 20 ವರ್ಷದಿಂದ ಕೆಲಸ ಮಾಡುತ್ತಿದ್ದು, ಈಗ ನಿವೃತ್ತಿ ಜೀವನ ನಡೆಸುತ್ತಿದ್ದರು. ಪತ್ನಿ ಸಾವಿತ್ರಿ ಹಾಗೂ ಮಕ್ಕಳಾದ ರಾಧಾಕೃಷ್ಣ, ರಾಮಚಂದ್ರ,ವಿದ್ಯಾಶ್ರೀ ರವರನ್ನು ಅಗಲಿದ್ದಾರೆ.