ಬೆಳ್ತಂಗಡಿ: ಜ. 26 ರಂದು ಗಣರಾಜ್ಯೋತ್ಸವನ್ನು ದಯಾ ವಿಶೇಷ ಶಾಲೆಯಲ್ಲಿ ಆಚರಿಸಲಾಯಿತು. ದಯಾ ವಿಶೇಷ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಹಾಜರಿದ್ದರು. ಶಾಲಾ ಸಂಚಾಲಕ ವಿನೋದ್ ಮಸ್ಕರೇನ್ಹಸ್ 76ನೇ ವರ್ಷದ ಗಣರಾಜ್ಯೋತ್ಸವದ ದಿನದ ಶುಭಾಶಯಗಳನ್ನು ತಿಳಿಸುತ್ತಾ, ಜಾತಿ, ಧರ್ಮ ಭೇದಭಾವವಿಲ್ಲದೇ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕು. ನಮ್ಮ ಭಾರತ ಸಂವಿದಾನದಲ್ಲಿ ಹಕ್ಕುಗಳ ಬಗ್ಗೆ ಸವಿಸ್ತಾರವಾಗಿ ನಮಗೆ ತಿಳಿಸಲ್ಪಟ್ಟಿದೆ. ಯಾವ ರೀತಿಯಲ್ಲಿ ನಾವು ಹಕ್ಕುಗಳನ್ನು ಪಡೆಯಬಹುದು ಮತ್ತು ಸಂವಿಧಾನವನ್ನು ಪಾಲಿಸಬಹುದು ಎಂದು ತಿಳಿಸಿದರು.
ಎಲ್ಲಾ ರಾಜ್ಯಗಳಲ್ಲಿ ಗಣರಾಜ್ಯೋತ್ಸವನ್ನು ಆಚರಿಸಿ ಸಂಭ್ರಮಿಸುತ್ತೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಭಾಷೆ, ಆಚರಣೆ, ಊಟದ ಪದ್ದತಿ ಬೇರೆ ಬೇರೆ ಇದ್ದರೂ ನಾವು ಒಂದೇ ಎಂಬುದನ್ನು ಕಾಣಬಹುದು. ಅದೇ ರೀತಿ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ಒಳ್ಳೆ ರೀತಿಯಲ್ಲಿ ನಿಭಾಯಿಸಿ, ನಾವೆಲ್ಲಾ ಒಂದೇ ತಾಯಿಯ ಮಕ್ಕಳು, ನಾವೆಲ್ಲ ಒಟ್ಟಿಗೆ ಬೆರೆತು ಉತ್ತಮ ನಾಗರಿಕರಾಗೋಣ ಎಂದು ಆಶೀಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ನಿರ್ದೇಶಕ ವಿನೋದ್ ಮಸ್ಕರೇನ್ಹಸ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ದಿವ್ಯ, ಶಿಕ್ಷಕಿ ಸುಜಾತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣರಾಜ್ಯೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಸಂವಿಧಾನದ ಪೀಠಿಕೆಯ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ದಿವ್ಯ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವಿತ್ತರು.