ಕುತ್ತೂರಿನ ಸುಂದರಿ ಸಹಿತ ಆರು ಮಂದಿ ನಕ್ಸಲರು ಪೊಲೀಸ್‌ ಕಸ್ಟಡಿಗೆ ಚಿಕ್ಕಮಗಳೂರಿನಲ್ಲಿ ವಿಚಾರಣೆ: ಊಟ ಮಾಡಿ ತೆರಳಿದ್ದ ಜಾಗ ಮಹಜರು

0

ಬೆಳ್ತಂಗಡಿ: ಬೆಂಗಳೂರಿನಲ್ಲಿ ಜ. 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಶರಣಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ನ್ಯಾಯಾಂಗ ಬಂಧನದಲ್ಲಿರುವ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತೂರಿನ ಸುಂದರಿ ಸಹಿತ ಆರು ಮಂದಿ ನಕ್ಸಲರನ್ನು ಚಿಕ್ಕಮಗಳೂರು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಪೊಲೀಸರಿಂದ ವಿಚಾರಣೆ: ಮುಖ್ಯಮಂತ್ರಿ ಎದುರು ಶರಣಾಗಿ ನ್ಯಾಯಾಂಗ ಬಂಧನದಲ್ಲಿದ್ದ ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರೆಪ್ಪ ಅರೋಲಿ ಕುತ್ತೂರು, ಕೆ.ವಸಂತ ತಮಿಳುನಾಡು ಮತ್ತು ಟಿ.ಎನ್.ಜಿಷಾ ಕೇರಳ ಅವರನ್ನು ಒಳಗೊಂಡ ನಕ್ಸಲರ ತಂಡವನ್ನು ವಿಚಾರಣೆಗೆ ಒಳಪಡಿಸುವುದಕ್ಕಾಗಿ ಚಿಕ್ಕಮಗಳೂರು ಪೊಲೀಸರು ಎನ್‌ಐಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದು ದಿನಗಳ ಕಾಲ ವಿಚಾರಣೆಗೆ ಅವಕಾಶ ನೀಡಿ ನ್ಯಾಯಾಲಯ ಪೊಲೀಸರಿಗೆ ಒಪ್ಪಿಸಿತ್ತು. ಈ ನಿಟ್ಟಿನಲ್ಲಿ ಗುರುವಾರ ರಾತ್ರಿಯೇ ನಗರಕ್ಕೆ ನಕ್ಸಲರನ್ನು ಕರೆ ತರಲಾಗಿದ್ದು ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್ ಮತ್ತು ಅನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ಲತಾ ಮುಂಡಗಾರು ವಿರುದ್ಧ ಕರ್ನಾಟಕದಲ್ಲಿ ದಾಖಲಾಗಿರುವ 65 ಪ್ರಕರಣಗಳ ಪೈಕಿ 4.3 ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ವನಜಾಕ್ಷಿ ವಿರುದ್ಧ ಒಟ್ಟಾರೆ 25 ಪ್ರಕರಣಗಳಿದ್ದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 19 ಪ್ರಕರಣ ದಾಖಲಾಗಿವೆ. ಕುತ್ತೂರಿನ ಸುಂದರಿ ವಿರುದ್ಧ ರಾಜ್ಯದಲ್ಲಿ 23 ಪ್ರಕರಣಗಳನ್ನು ಮೂರು ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ಮಾರಪ್ಪ ಆರೋಲಿ ವಿರುದ್ಧ ರಾಜ್ಯದಲ್ಲಿ 13 ಪ್ರಕರಣಗಳಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ. ಕೇರಳದ ಜಿಷಾ ಮತ್ತು ತಮಿಳುನಾಡಿನ ಕೆ.ವಸಂತ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಶರಣಾಗತರಾಗಿರುವ ನಕ್ಸಲರ ವಿರುದ್ಧ ಬಹುತೇಕ ಪ್ರಕರಣಗಳು ಕೊಪ್ಪ ತಾಲ್ಲೂಕಿನ ಜಯಪುರ ಮತ್ತು ಶೃಂಗೇರಿ ತಾಣೆಯಲ್ಲೇ ದಾಖಲಾಗಿದೆ ಜಯಪುರ ಠಾಣಾ ವ್ಯಾಪ್ತಿಯ ಕಿತ್ತಲೆಗುಳಿ ಬಳಿಯ ಅರಣ್ಯದಲ್ಲಿ ಆರು ಬಂದೂಕು ಸೇರಿ ಮದ್ದುಗುಂಡುಗಳು ಜ.11ರಂದು ಪೊಲೀಸರಿಗೆ ದೊರೆತಿದ್ದವು. ಇದೇ ಕಾಡನಿಂದ ಸುಂದರಿ ಕುತ್ತೂರು ಬಂದು ನಕ್ಸಲರು ಜ.3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಎದುರು ಬೆಂಗಳೂರಿನಲ್ಲಿ ಶರಣಾಗಿದ್ದರು.

ಆರೋಗ್ಯ ತಪಾಸಣೆ: ಶನಿವಾರ ಚಿಕ್ಕಮಗಳೂರು ನಗರದ ಮಲ್ಲೇಗೌಡ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯಲ್ಲಿ ಆರು ನಕ್ಸಲರನ್ನು ಆರೋಗ್ಯ ತಪಾಸಣೆಗೊಳಪಡಿಸಲಾಗಿದೆ. ತನಿಖಾಧಿಕಾರಿಯಾಗಿರುವ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ನಲ್ಲಿ ನಕ್ಸಲರನ್ನು ಗುರುವಾರ ರಾತ್ರಿಯೇ ಕರೆ ತರಲಾಗಿತ್ತು. ಅವರನ್ನು ರಾಮನಹಳ್ಳಿ ಡಿಎಆರ್ ಘಟಕದಲ್ಲಿ ಇರಿಸಲಾಗಿತ್ತು. ಎಸ್ಪಿ ಡಾ. ವಿಕ್ರಮ ಅಮಟೆ ಅವರು ಶುಕ್ರವಾರ ಬೆಂಗಳೂರಿಗೆ ತೆರಳಿದ್ದರಿಂದ ಶನಿವಾರ ಆರೂ ಮಂದಿಯನ್ನು ಎಸ್ಪಿ ಅವರ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಗಿದೆ. ಇದಕ್ಕೂ ಮುನ್ನ ಪೊಲೀಸ್ ಬಿಗಿ ಭದ್ರತೆಯಲ್ಲಿ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆಗೊಳಪಡಿಸಲಾಯಿತು. ಈ ವೇಳೆ ಅವರು ವೈದ್ಯರ ಬಳಿ ತಮ್ಮ ಅನಾರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಮುಂಡಗಾರು ಲತಾ ತನಗೆ ಥೈರಾಯ್ಡ್ ಅರುವ ಸಮಸ್ಯೆ ಬಗ್ಗೆ ವೈದ್ಯರ ಬಳಿ ಹೇಳಿಕೊಂಡಿದ್ದಾಳೆ. ಇನ್ನೊಬ್ಬ ನಕ್ಸಲ್‌ ಕೈ ಮೇಲೆ ಗನ್‌ಶಾಟ್ ಆಗಿರುವುದು ಪತ್ತೆಯಾಗಿದೆ. ಆರು ಮಂದಿಯಲ್ಲಿ ಬಹುತೇಕರಿಗೆ ಬಿ.ಪಿ., ಶುಗರ್ ಇರುವುದು ಪತ್ತೆಯಾಗಿದೆ.

ನಕ್ಸಲರು ಊಟ ಮಾಡಿ ತೆರಳಿದ್ದ ಜಾಗ ಮಹಜರು: ಆರು.ನಕ್ಸಲೀಯರನ್ನು ಕಸ್ಟಡಿಗೆ ತೆಗೆದುಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ಭಾನುವಾರ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ತಾಣೆ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಸ್ಥಳ ಮಹಜರು ನಡೆಸಿದರು. ಮುಂಡಗಾರು ಲತಾ, ಬಾಳೆಹೊಳೆ ವನಜಾಕ್ಷಿ, ಸುಂದರಿ ಕುತ್ತೂರು, ಜಯಣ್ಯ, ವಸಂತ್ ಹಾಗೂ ಜೀಷಾ ಅವರನ್ನು ಜಯಪುರ ಸಮೀಪದ ಕಡೆಗುಂದಿ ಗ್ರಾಮಕ್ಕೆ ಭಾನುವಾರ ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ನಡೆಸಲಾಯಿತು. ಶರಣಾಗತಿಗೂ ಮುನ್ನ ಮುಂಡಗಾರು ಲತಾ, ಜಯಣ್ಣ ಮತ್ತಿತರರು ಕಡೆಗುಂದಿಯ ಸುಬ್ಬಿಗೌಡ ಮನೆಗೆ ಬಂದು ರಾತ್ರಿ ಊಟ ಮಾಡಿ ತೆರಳಿದ್ದರು. ನಂತರದಲ್ಲಿ ಪೊಲೀಸರು ಬಂದೂಕುಗಳನ್ನು ವಶಕ್ಕೆ ಪಡೆದಿದ್ದರು. ಅವು ನಕ್ಸಲೀಯರಿಗೆ ಸೇರಿದ ಬಂದೂಕು ಎಂದು ಪೊಲೀಸರು ಪ್ರಕರಣ ದಾಖಲು ಮಾಡಿದ್ದರು.

LEAVE A REPLY

Please enter your comment!
Please enter your name here