

ಕಾಯರ್ತಡ್ಕ: ಸ. ಹಿ. ಪ್ರಾ ಶಾಲೆಯ ಶತಮಾನೋತ್ಸವ 2026ರ ಜ. 19 ರಂದು ಶತಮಾನೋತ್ಸವ ಆಚರಣೆ ಗೆ ಸಿದ್ದವಾಗುತ್ತಿದ್ದೂ, ಈ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ನಿರ್ಮಿಸಲ್ಪಡುವ ನೂತನ ಸಭಾಭವನದ ಶಿಲನ್ಯಾಸವನ್ನು ಶಾಸಕ ಹರೀಶ್ ಪೂಂಜ ಜ.. 19 ರಂದು ನೆರವೇರಿಸಿದರು.

ಶತಮಾನೋತ್ಸವ ಸಮಿತಿಯ ಅಧ್ಯಕ್ಷ ವಿಜಯ್ ಕುಮಾರ್ ಹೆಚ್., ಉಪಾಧ್ಯಕ್ಷ ಜೋಸೆಫ್ ಕೆ. ಡಿ., ಎಸ್. ಡಿ. ಎಂ. ಸಿ ಅಧ್ಯಕ್ಷ ಪ್ರಸನ್ನ ಎ. ಪಿ. ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಗುರುಗಳಾದ ಕೃಷ್ಣಪ್ಪ ಟಿ., ಪಂಚಾಯತ್ ಸದಸ್ಯ ಹರೀಶ್ ಕೊಯ್ಲಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಯೋಗೀಶ್ ಅಂಗರಂಡ, ಹಿರಿಯ ವಿದ್ಯಾರ್ಥಿ ಸಂಘದ ಡಾ. ಕುಶಾಲಪ್ಪ, ಪಂಚಾಯತ್ ಉಪಾಧ್ಯಕ್ಷ ಮಂಜುನಾಥ್ ಗೌಡ ಹಾರಿತ್ತ ಕಜೆ, ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ, ಪ. ಸದಸ್ಯೆ ಮಮತಾ, ಗಂಗಾಧರ ಭಂಡಾರಿ, ಶಾಲಾ ನಾಯಕಿ ಮಹಾಶ್ರೀ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.