p>
ಬೆಳ್ತಂಗಡಿ ಜ.11: ಮೂಡಬಿದಿರೆ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಹಾಗೂ ಟ್ರಸ್ಟಿ ಶರತ್ ಗೋರೆ ಎ. ಎನ್. ವೈ. ಇ. ಎಲ್. ಪಿ ಗ್ರೂಪ್ ಕೊಡಮಾಡುವ 2024-25ನೇ ಸಾಲಿನ ಕರ್ನಾಟಕ ಶಿಕ್ಷಣ ರತ್ನ – ಅತ್ಯುತ್ತಮ ಭೌತಶಾಸ್ತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಶರತ್ ಗೋರೆ ಶಿಕ್ಷಣ ರಂಗಕ್ಕೆ ನೀಡಿರುವ ಕೊಡುಗೆ ಹಾಗೂ ಗೈದಿರುವ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಬೆಂಗಳೂರಿನ ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಎ. ಎನ್. ವೈ. ಇ. ಎಲ್. ಪಿ ಸಂಸ್ಥೆಯ ನಿರ್ದೇಶಕ ಮೊಹಮ್ಮದ್ ಜಾಕೀರ್ ಹುಸೈನ್, ಕನ್ನಡ ಚಿತ್ರರಂಗದ ನಟ ರಾಕೇಶ್ ಅಡಿಗ ಮೊದಲಾದವರು ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.