ಮಿತ್ತಬಾಗಿಲು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮ ಜ. 7 ರಂದು ನಡೆಯಿತು. ಬೆಳಿಗ್ಗೆ 9.30 ಕ್ಕೆ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಗೌರವಾಧ್ಯಕ್ಷ ಹೈದರಾಲಿ ಧ್ವಜರೋಹಣ ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ನ ಅಧ್ಯಕ್ಷ ವಿನಯಚಂದ್ರ ಅಧ್ಯಕ್ಷತೆಯನ್ನು ವಹಿಸಿದ್ದರು.
ರಾಷ್ಟ್ರಪ್ರಶಸ್ತಿ ವಿಜೇತ ಬಿ. ಕೆ. ದೇವರಾವ್ ಅಮೈ ದೀಪ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ನ ಉಪಾಧ್ಯಕ್ಷೆ ವಿಜಯ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಮುಸ್ತಫ ಡಿ. ಎಚ್. ಎಸ್. ಡಿ. ಎಮ್. ಸಿ ಅಧ್ಯಕ್ಷ ಹೈದರಾಲಿ, ಗ್ರಾಮ ಪಂಷಾಯತ್ ಸದಸ್ಯ ಅಹಮ್ಮದ್ ಕಬೀರ್, ಚೇತನ, ಚಂದ್ರಶೇಖರಗೌಡ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಟಿ. ಬಿ. ಬಸವ ಲಿಂಗಪ್ಪ, ಶಿಕ್ಷಣಾ ಸಂಯೋಜಕ ಚೇತನಾಕ್ಷಿ, ಪಂಚಾಯತ್ ಅಭಿವ್ಥಧ್ಧಿ ಅಧಿಕರಿ ಮೀಹನ್ ಬಂಗೇರ, ಮುಂಡಾಜೆ ಕ್ಲಸ್ಟರ್ ನ ಸಿ. ಅರ್. ಪಿ ಪ್ರಶಾಂತ್ ಪೂಜಾರಿ, ಸ್ಥಳೀಯ ಪ್ರೌಢ ಶಾಲಾ ಮುಖ್ಯೋಪಧ್ಯಾಯ ಗೋಪಾಲ, ಕಿಶೋರ್ ಕುಮಾರ ಅಧ್ಯಕ್ಷರು ಪ್ರಾ. ಶಾ. ಶಿ. ಸಂ. ಬೆಳ್ತಂಗಡಿ, ರಾಜ್ಯ ಪ್ರಶಸ್ತಿ ವಿಜೇತರು, ಶಿಕ್ಷಕರು, ಅಮಿತನಂದ್ ಹೆಗ್ಡೆ, ಮು. ಕಿ ಇಂದಿರಾ ಕುಮಾರಿ, ಶಾಲಾ ವಿದ್ಯಾರ್ಥಿ ನಾಯಕಿ ಆಯಿಷಾ ಹಬಿಯ್ಯ ಮುಂತಾದವರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಕುಮಾರಿ ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿದರು. ಸಹಶಿಕ್ಷಕಿ ಸಹನ ಲಕ್ಕಜ್ಜೇರ್ ವರದಿ ವಾಚನ ಮಾಡಿದರು. ಮುಖ್ಯ ಅತಿಥಿಗಳ ಭಾಷಣದ ನಂತರ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಹಿಸಲಾಯಿತು. ಶಾಲೆಯ ಸಹಶಿಕ್ಷಕಿಯರು ಬಹುಮಾನ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಂಜೆ ಅಂಗನವಾಡಿ ಮಕ್ಕಳು, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ಸಹ ಶಿಕ್ಷಕ ತಿಪ್ಪೆಸ್ವಾಮಿ ಧನ್ಯವಾದವಿತ್ತರು.