p>
ಕುದ್ರಾಯ: ಧರ್ಮಸ್ಥಳ – ಕೊಕ್ಕಡ ರಾಜ್ಯ ಹೆದ್ದಾರಿಯ ಬೊಲಿಯಾರು ಸಮೀಪ ಮೋರಿಯೊಂದರ ತಡೆ ಗೋಡೆ ಕುಸಿದಿದ್ದು ಡಾಮರ್ ರಸ್ತೆಗೆ ಹೊಂದಿಕೊಂಡಂತೆ ಬೃಹತ್ ಗಾತ್ರದ ಹೊಂಡದಂತಾಗಿದೆ. ವಾಹನವನ್ನು ಓವರ್ ಟೇಕ್ ಮಾಡುವ ಬರದಲ್ಲಿ ಯಾರು ಬೇಕಾದರೂ ಈ ಹೊಂಡಕ್ಕೆ ಬೀಳುವ ಸಂಭವವಿದ್ದು, ಬಿದ್ದದ್ದೇ ಆದಲ್ಲಿ ಪ್ರಾಣಕ್ಕೆ ಅಪಾಯ ಖಚಿತ. ಸುಮಾರು 8 ಅಡಿ ಉದ್ದದ ಕಂದಕದಂತಿರುವ ಈ ಜಾಗದಲ್ಲಿ ಅಲ್ಪದರಲ್ಲೇ ಪಾರಾಗಿರುವವರು ಸುದ್ದಿನ್ಯೂಸ್ ಗೆ ಕರೆಮಾಡಿ ಒಮ್ಮೆ ಅದನ್ನು ವರದಿ ಮಾಡಿ ಸಂಬಂಧಪಟ್ಟ ಇಲಾಖೆಯವರು ಸರಿಪಡಿಸುವಂತಾಗಲಿ ಎನ್ನುತ್ತಿದ್ದಾರೆ.
ದಿನನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆ, ಈ ರಸ್ತೆಯಲ್ಲಿ ಧರ್ಮಸ್ಥಳದಿಂದ ಸೌತಡ್ಕ, ಸುಬ್ರಮಣ್ಯ, ಉಜಿರೆ, ಬೆಳ್ತಂಗಡಿ, ಮಂಗಳೂರು ಭಾಗಕ್ಕೆ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದೂ ಶಾಲಾ ವಾಹನಗಳು ಕೂಡ ಸಂಚರಿಸುತ್ತವೆ.