ಗಂಡಿಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘ – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂ. ಅನುದಾನ

0

p>

ನೆರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬೆಳ್ತಂಗಡಿ ಇದರ ವಲಯದ ಗಂಡಿಬಾಗಿಲು ಕಾರ್ಯಕ್ಷೇತ್ರದಲ್ಲಿ ನೂತನವಾಗಿ ರಚಿಸಲ್ಪಡುತ್ತಿರುವ ಹಾ. ಉ. ಸ. ಸಂಘ ಕಟ್ಟಡಕ್ಕೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಮಂಜೂರಾದ 2 ಲಕ್ಷ ರೂ. ಮೊತ್ತದ ಅನುದಾನದ ವಿತರಣೆ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮನೋಜ್, ಕಾರ್ಯದರ್ಶಿ ಶೈಲಾರಿಗೆ ಚೆಕ್ಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸುರೇಂದ್ರ, ಮೇಲ್ವಿಚಾರಕ ಗಣೇಶ್ ಕುಮಾರ್, ಸೇವಾಪ್ರತಿನಿಧಿ ಶಶಿಕಲಾ ಎಮ್. ಜಿ., ಸುಮಿತ್ರ, ಸರಿತಾ, ಗಂಡಿಬಾಗಿಲು ವಿಭಾಗದ ಒಕ್ಕೂಟ ಅಧ್ಯಕ್ಷ ರಾಜಪ್ಪಗೌಡ, ಊರಿನ ಗಣ್ಯರಾದ ಜೋಸೆಫ್, ಪಿಲೀಪ್ ಮತ್ತು ಸಂಘದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here