ಉಜಿರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಡಿ. 27 ರಂದು ಸಂಘದ ಕಚೇರಿ ಆವರಣದಲ್ಲಿ ಚುನಾವಣೆ ನಡೆಯಿತು.
3 ಮಹಾಸಭೆಗೆ ಗೈರು ಆದ ಸದಸ್ಯರಿಗೆ ಮತದಾನ ಹಕ್ಕು ನೀಡಬೇಕು ಎಂದು ಕೆಲವು ಸದಸ್ಯರು ನ್ಯಾಯಾಲಯಕ್ಕೆ ಹೋಗಿದ್ದು ನ್ಯಾಯಾಲಯ ಅವರಿಗೆ ಮತದಾನಕ್ಕೆ ಅವಕಾಶ ನೀಡಿದ್ದು ಅವರ ಮತಪತ್ರ ಬೇರೆಯೇ ಇಟ್ಟು ಚುನಾವಣೆ ನಡೆಸಿ ಎಣಿಕೆಯನ್ನೂ ಬೇರೆಯೇ ಮಾಡಲಾಗಿತ್ತು. ಹಾಗೂ ಇತರರ ಎಣಿಕೆ ಬೇರೆಯೇ ಮಾಡಲಾಗಿತ್ತು.
ನ್ಯಾಯಾಲಯಕ್ಕೆ ಹೋಗದೆ ಇದ್ದ ಸದಸ್ಯರು ಎಣಿಕೆಯಲ್ಲಿ ಒಟ್ಟು 12 ಸ್ಥಾನಗಳಲ್ಲಿ ಸಹಕಾರ ಭಾರತಿ 7 ಮಂದಿ ಮತ್ತು ಕಾಂಗ್ರೆಸ್ ಬೆಂಬಲಿತರು 5 ಮಂದಿ ಜಯ ಗಳಿಸಿದರೆ, ನ್ಯಾಯಾಲಯಕ್ಕೆ ಹೋದವರನ್ನು ಸೇರಿಸಿ ಎಣಿಕೆ ಮಾಡಿದಾಗ ಕಾಂಗ್ರೆಸ್ ಬೆಂಬಲಿತ 10 ಮಂದಿ ಮತ್ತು ಸಹಕಾರ ಭಾರತಿಯಿಂದ 2 ಮಂದಿ ಜಯ ಗಳಿಸಿದರು.
ನ್ಯಾಯಾಲಯದ ತೀರ್ಪಿಗಾಗಿ ಚುನಾವಣಾಧಿಕಾರಿ ಫಲಿತಾಂಶ ಘೋಷಣೆಯನ್ನು ತಡೆ ಹಿಡಿದು ಫಲಿತಾಂಶ ಪ್ರಕಟ ಮಾಡಲಿಲ್ಲ. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಪ್ರತಿಮಾ ನಿರ್ವಹಿಸಿದರು.