p>
ಉಜಿರೆ: ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿಯ ಪ್ರಯುಕ್ತ ಸೀತಾಪಹಾರ – ಜಟಾಯು ಮೋಕ್ಷ ಯಕ್ಷಗಾನ ತಾಳಮದ್ದಳೆ ಡಿ. 18 ರಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬನ್ನೆಂಗಳ ವೆಂಲಟರಮಣ ರಾವ್, ಚೆಂಡೆ ಮದ್ದಲೆಗಳಲ್ಲಿ ಜನಾರ್ದನ ತೋಳ್ಪಡಿತ್ತಾಯ ಹಾಗೂ ಶ್ರೇಯಸ್ ಪಾಳಂದೆ ಭಾಗವಹಿಸಿದ್ದು, ಶ್ರೀರಾಮನಾಗಿ ಬೆಳಾಲು ಲಕ್ಷ್ಮಣ ಗೌಡ, ಲಕ್ಷ್ಮಣನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಸೀತೆಯಾಗಿ ದಿನೇಶ್ ರಾವ್ ಬಳಂಜ, ರಾವಣನಾಗಿ ಸುರೇಶ್ ಕುದ್ರೆಂತಾಯ ಹಾಗೂ ಜಟಾಯುವಾಗಿ ಡಾ. ಸುಬ್ರಹ್ಮಣ್ಯ ಭಟ್ ಕಜೆ ಇವರು ಪಾತ್ರಗಳನ್ನು ನಿರ್ವಹಿಸಿದ್ದರು.
p>