p>
ಮೂಡುಕೋಡಿ: ಶಿವಕೃಪಾ ಎಂಬಲ್ಲಿ ನವೀನ್ ಎಂಬಾತನು ತನ್ನ ಪತ್ನಿ ಭಾಗ್ಯರವರಿಗೆ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಡಿ. 16 ರಂದು ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ಭಾಗ್ಯರವರು ಸುಮಾರು 16 ವರ್ಷಗಳ ಹಿಂದೆ ನವೀನ್ ರವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳು ಇರುತ್ತಾರೆ.
ನವೀನ್ ಮದುವೆಯಾಗಿ ಸುಮಾರು 5 ವರ್ಷ ಅನ್ನೋನ್ಯವಾಗಿದ್ದು ನಂತರ ವಿಪರೀತ ಮದ್ಯ ಸೇವಿಸುವ ಚಟ ಹೊಂದಿ ವಿನಾ: ಕಾರಣ ಆಗಾಗ ಕ್ಷುಲ್ಲಕ ವಿಚಾರದಲ್ಲಿ ಮಾತಿನ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಡಿ.15 ರಂದು ರಾತ್ರಿ ಆಪಾದಿತನು ತನ್ನ ಮನೆಯಾದ ಮೂಡುಕೋಡಿ ಗ್ರಾಮದ ಶಿವಕೃಪಾ ಎಂಬಲ್ಲಿ ಭಾಗ್ಯರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿದೆ ಎಂದು ಭಾಗ್ಯರವರು ದೂರಿದ್ದಾರೆ.
p>