ಬೆಳ್ತಂಗಡಿ: ಗುಪ್ತಚರ ಇಲಾಖೆ ವರದಿ ನೀಡಿದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಧರ್ಮಸ್ಥಳ ನಿವಾಸಿಯನ್ನು ಭೇಟಿಯಾಗಲು ಬಂದಿದ್ದ ಚಿಕ್ಕಮಗಳೂರು ಕೊಪ್ಪ ಮೂಲದ ಈರ್ವರು ಶಂಕಿತ ನಕ್ಸಲರನ್ನು ವಶಕ್ಕೆ ಪಡೆದಿದ್ದಾರೆ.
ಕಸ್ತೂರಿ ರಂಗನ್ ವರದಿಯ ವಿರುದ್ಧ ಜನರ ಹೋರಾಟ ತೀವ್ರಗೊಳ್ಳುತ್ತಿರುವಂತೆಯೇ ದಶಕಗಳ ಬಳಿಕ ಮಲೆನಾಡಿನಲ್ಲಿ ನಕ್ಸಲರ ಸದ್ದು ಮತ್ತೆ ಹೆಚ್ಚಾಗಿದೆ ಎಂಬ ಸುದ್ದಿಯ ನಡುವೆಯೇ ಇದೀಗ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನಿವಾಸಿಯೋರ್ವರನ್ನು ನಕ್ಸಲರು ಭೇಟಿಯಾಗಿದ್ದಾರೆ ಎಂಬ ಮಾಹಿತಿ ಜನರನ್ನು ಬೆಚ್ಚಿ ಬೀಳಿಸಿದೆ. ನಕ್ಸಲ್ ಪರ ಚಿಂತನೆ ಹೊಂದಿರುವ ಧರ್ಮಸ್ಥಳ ನಿವಾಸಿಯನ್ನು ಶಂಕಿತ ನಕ್ಸಲರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದ ಬೆನ್ನಲ್ಲಿಯೇ ಕಾರ್ಯಾಚರಣೆಗೆ ಇಳಿದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣಾ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಈರ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಗುಪ್ತಚರ ಇಲಾಖೆ ಮಾಹಿತಿ ಎ.ಎನ್.ಎಫ್. ಕಾರ್ಯಾಚರಣೆ – ಧರ್ಮಸ್ಥಳ ನಿವಾಸಿಯನ್ನು ಭೇಟಿಯಾದ ಶಂಕಿತ ನಕ್ಸಲರು ವಶಕ್ಕೆ
p>