ಕಳಿಯ: ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ನ.15 ರಂದು ನಡೆಯಿತು.
ಅಂಗನವಾಡಿ ಕೇಂದ್ರದ ಪುಟಾಣಿ ಸಾತ್ವಿಕ್, ಮೇಘಶ್ರೀ, ಅಸ್ತಿನಿ, ರಿದಾಫಾತಿಮ ದೀಪ ಪ್ರಜ್ವಲಣೆ ಮಾಡಿದರು.ಬಾಲವಿಕಾಸ ಸಮಿತಿ ಅಧ್ಯಕ್ಷೆ ನೀತಾ ಸತೀಶ್ ಅಧ್ಯಕ್ಷತೆ ವಹಿಸಿದ್ದರು.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ. ಪಂಚಾಯತ್ ಸದಸ್ಯ, ಆಶಾ ಕಾರ್ಯಕರ್ತೆ ಸುಭಾಷಿಣಿ ಜನಾರ್ದನ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಾ ಜವಹರಲಾಲ್ ನೆಹರೂ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ದೇಶದಲ್ಲಿ ಆಚರಿಸುವ ಮೂಲಕ ಮಕ್ಕಳ ಭವಿಷ್ಯದಲ್ಲಿ ಭಾರತದ ಉತ್ತಮ ಪ್ರಜೆಗಳಾಗಿ ಜವಾಹರಲಾಲ್ ನೆಹರೂ ಅವರಂತೆಯೇ ನಮ್ಮ ಅಂಗನವಾಡಿ ಮಕ್ಕಳು ಹೆಸರು ಗಳಿಸುವಂತಾಗಲಿ ಎಂದು ಹೇಳಿದರು. ಹಾಗೂ ಬೊಳ್ಳುಕಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯ ಸಿನಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದ ಮಕ್ಕಳಿಗೆ ಸ್ಥಳೀಯರಾದ ಮಿಶ್ರಿಯಾ, ಸಫ್ರೀನಾ, ಸ್ವಾಬೀರ, ಲತಾಲಕ್ಷಿ, ಇರ್ಫಾನ್, ಆಯಿಷಾ, ನೀತಾ ಸತೀಶ್ ಮಕ್ಕಳಿಗೆ ಬಹುಮಾನ ಕೊಡುಗೆ ನೀಡಿದರು. ಮಹಮ್ಮದ್ ಝನೈದ್, ಇರ್ಫಾನ್, ಸಿನಾನ್, ಗೀತಾ, ವಾಣಿ ಸಿಹಿ ತಿಂಡಿ ನೀಡಿ ಸಹಕರಿಸಿದರು.
ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಸಹಾಯಕಿ ಗೀತಾ ಮತ್ತು ವಿಧ್ಯಾಭಿಮಾನಿಗಳು ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್.ಸ್ವಾಗತಿಸಿ, ಧನ್ಯವಾದವಿತ್ತರು.