ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇದರ ವತಿಯಿಂದ ನಡೆಸಲ್ಪಡುವ ಉಡುಪಿ ಜಿಲ್ಲಾ ಮಟ್ಟದ ನೈತಿಕ ಶಿಕ್ಷಣ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನ.19ರಂದು ಡಾ. ಶಿವರಾಮ ಕಾರಂತ ಧೀಂ ಪಾರ್ಕ್ ಕೋಟೆ ಇಲ್ಲಿ ನೆರವೇರಿತು.
ಕೆ. ಸತೀಶ್ ಕುಂದರ್ ಅಧ್ಯಕ್ಷರು ಗ್ರಾಮಪಂಚಾಯತ್ ಪೂಜ್ಯರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ರವೀಂದ್ರ ರಾವ್ ಪಿ.ಡಿ.ಓ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ರವೀಂದ್ರ ತಿಂಗಳಾಯ ಭಾಗವಹಿಸಿ ಶುಭ ಹಾರೈಸಿದರು.
ಡಾ ಶಶಿಕಾಂತ್ ಜೈನ್ ನಿರ್ದೇಶಕರು ಯೋಜನೆಯ ಬಗ್ಗೆ ಪ್ರಾಸ್ತಾವನೆ ಮಾಡಿದರು ರಾಜ್ಯ ಮಟ್ಟದ ಸ್ಪರ್ಧೆ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಅತಿಧಿಗಳ ಸಮ್ಮುಖದಲ್ಲಿ ಜನವರಿ ತಿಂಗಳಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಶಿವರಾಮ ಕಾರಂತ ಟ್ರಸ್ಟಿನ ಕಾರ್ಯದರ್ಶಿ ನರೇಂದ್ರ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಸಂಘಟಕ ಅಶೋಕ ಪೂಜಾರಿ ಸ್ಪರ್ಧೆಯ ಮಾಹಿತಿಯನ್ನು ನೀಡಿದರು.