ಕಕ್ಯಪದವು: ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ಎಲ್. ಸಿ.ಆರ್ ದಶಂ ಕ್ರೀಡಾ ದಿವಸ್ ಉದ್ಘಾಟನಾ ಸಮಾರಂಭ

0

ಕಕ್ಯಪದವು: ನ.16 ರಂದು ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ದಶಮಾನೋತ್ಸವದ ಅಂಗವಾಗಿ 2024-25 ಸಾಲಿನ ‘ಎಲ್.ಸಿ.ಆರ್ ದಶಂ ಕ್ರೀಡಾ ದಿವಸ್ ‘ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಿತು.ವಿದ್ಯಾರ್ಥಿ ತಂಡಗಳ ಆಕರ್ಷಕ ಪಥಸಂಚಲದೊಂದಿಗೆ ಕ್ರೀಡಾಂಗಣಕ್ಕೆ ಚಾಲನೆಯನ್ನು ನೀಡಲಾಯಿತು. ಕ್ರೀಡಾಕೂಟದ ಧ್ವಜಾರೋಹಣವನ್ನು ಸಂಸ್ಥೆಯ ಸಂಚಾಲಕ ಬಬಿತ ಆರ್ ನಾಥ್ ನೆರವೇರಿಸಿದರು. ಕ್ರೀಡಾ ಸಾಧಕ ವಿದ್ಯಾರ್ಥಿಗಳಿಂದ ‌ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಲಾಯಿತು.
ಸಮಾರಂಭದ ಉದ್ಘಾಟಕರಾದ ಪುರಂದರ ಕುಕ್ಕಾಜೆ, ನಿರೀಕ್ಷಕರು ವಾಣಿಜ್ಯ ತೆರಿಗೆ ಇಲಾಖೆ ಇವರು ಉದ್ಘಾಟಿಸಿ ಸಂಸ್ಥೆಯ ಬಗೆಗಿನ ಶ್ಲಾಘನೀಯ ಮಾತುಗಳೊಂದಿಗೆ ಶಿಕ್ಷಣವೆಂಬುದು ಕೇವಲ ಪ್ರಮಾಣಪತ್ರಕ್ಕೆ ಸೀಮಿತ ವಾದುದಲ್ಲ, ಶಿಕ್ಷಣವೇ ಜೀವನವಾಗಬೇಕು. ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ವಿದ್ಯಾರ್ಥಿ ದೆಸೆಯಲ್ಲಿಯೇ ನಾವು ಸಕ್ರಿಯವರಾಗಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉಳಿ ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ವಿದ್ಯಾಶ್ರೀ ಮಾತನಾಡಿ ಅಭಿವೃದ್ಧಿಯ ಪಥದಲ್ಲಿರುವ ಉಳಿಗ್ರಾಮದ ಕಕ್ಯಪದವು ಸಂಸ್ಕಾರವಂತ ಜನರನ್ನು ಹೊಂದಿರುವ ಊರಾಗಿದ್ದು ಇಂಥ ಊರಿನ ಈ ವಿದ್ಯಾಸಂಸ್ಥೆಯು ಸಂಸ್ಕಾರಯುತ ಶಿಕ್ಷಣವನ್ನು ನೀಡುವಲ್ಲಿ ತಮ್ಮದೆ ಛಾಪನ್ನು ಮೂಡಿಸುವುದರೊಂದಿಗೆ, ಉಳಿ ಗ್ರಾಮದ ಅಭಿವೃದ್ಧಿಯು ತಾಲೂಕು ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಈ ವಿದ್ಯಾಸಂಸ್ಥೆಯ ಪಾತ್ರ ಮಹತ್ವಪೂರ್ಣ ಎಂದರು.
ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೊ ಅಧ್ಯಕ್ಷೀಯ ಮಾತುಗಳೊಂದಿಗೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ಸಂಚಾಲಕ ಬಬಿತಾ ಆರ್ ನಾಥ್ ಗೌರವ ಉಪಸ್ಥಿತರಿದ್ದು, ಸಂಸ್ಥೆಯ ಕಾರ್ಯದರ್ಶಿ ಶಿವಾನಿ ಆರ್ ನಾಥ್ ಅಧ್ಯಕ್ಷತೆ ವಹಿಸಿದ್ದರು. ಉಳಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ರೇವತಿ ಮುದಲಾಡಿ ಹಾಗೂ ದಿ ನ್ಯೂ ಇಂಡಿಯನ್ ಎಸುರೆನ್ಸ್ ಕಂಪನಿ ಲಿಮಿಟೆಡ್ ಅಭಿವೃದ್ಧಿ ಅಧಿಕಾರಿಯಾದ ಇಬ್ರಾಹಿಂ, ಶ್ರೀಯುತ ರಾಮಪ್ಪ ಸಾಲಿಯಾನ್ ಅನುಗ್ರಹ ಕಕ್ಯಪದವು, ಶ್ರೀಯುತ ಹಮೀದ್ ನಿವೃತ್ತ ಮುಖ್ಯ ಶಿಕ್ಷಕ, ಸಂಸ್ಥೆಯ ಸಂಯೋಜಕ ಯಶವಂತ್ ಜಿ ನಾಯಕ್, ಪ್ರಾಥಮಿಕ ಹಾಗೂ ಪ್ರೌಢವಿಭಾಗದ ಮುಖ್ಯ ಶಿಕ್ಷಕಿ ವಿಜಯ ಕೆ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ವಿಜಯಾ ಕೆ ಸ್ವಾಗತಿಸಿ, ವಿದ್ಯಾರ್ಥಿಸಂಘದ ನಾಯಕನಾದ 10ನೇ ತರಗತಿಯ ಅಭಿನಯ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ವಾಚಿಸಿ, ಸಂಸ್ಥೆಯ ಕೀಡಾಸಂಯೋಜಕಿ ಹರಿಣಾಕ್ಷಿ ಜಿ ಕೆ ವಂದಿಸಿದರು. ಸಹ ಶಿಕ್ಷಕಿಯರಾದ ಭವ್ಯ, ಲೀದಿಯ ಹಾಗೂ ಉಪನ್ಯಾಸಕಿ ರೂಪಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಕೂಟದ ಭಾಗವಾಗಿ ವಿದ್ಯಾರ್ಥಿಗಳಿಂದ ಅತ್ಯುದ್ಭುತ ಕ್ರೀಡಾ ನೃತ್ಯ , ಡಿಸ್ಪ್ಲೇ ಕಾರ್ಯಕ್ರಮ ನಡೆಯಿತು.

p>

LEAVE A REPLY

Please enter your comment!
Please enter your name here