ಬಾರ್ಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಸಹಕಾರ ಸಪ್ತಾಹ, ವಿಚಾರಗೋಷ್ಠಿ – ಸುದ್ದಿ ಲೈವ್ ಯ್ಯೂಟುಬ್ ಚಾನೆಲ್ ನಲ್ಲಿ ನೇರಪ್ರಸಾರ

0

ಬೆಳ್ತಂಗಡಿ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ನೇತೃತ್ವದಲ್ಲಿ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ-೨೦೨೪ ತಾಲೂಕು ಮಟ್ಟದ ಸಹಕಾರ ಸಪ್ತಾಹ ಸಮಾರಂಭ ಹಾಗೂ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದರ ಬಗ್ಗೆ ವಿಚಾರಗೋಷ್ಠಿ ನ.೧೮ರಂದು ಸಹಕಾರ ರತ್ನ ನಿರಂಜನ್ ಭಾವಂತಬೆಟ್ಟು ವೇದಿಕೆ ಬಾರ್ಯದಲ್ಲಿ ಜರುಗಿದೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಬೆಳ್ತಂಗಡಿ ತಾಲೂಕು ಸಹಕಾರಿ ಯೂನಿಯನ್, ಬೆಳ್ತಂಗಡಿ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳು, ಹಾಲು ಉತ್ಪಾದಕರ ಸಹಕಾರಿ ಸಂಘಗಳು ಹಾಗೂ ತಾಲೂಕಿನ ಇತರ ಎಲ್ಲ ಸಹಕಾರಿ ಸಂಘಗಳ ಸಹಕಾರ-ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಬಾರ್ಯ ಪ್ಯಾಕ್ಸ್ ಅಧ್ಯಕ್ಷ ಪ್ರವೀಣ್ ರೈ ಪಿ. ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ತಣ್ಣೀರುಪಂತ ಪ್ಯಾಕ್ಸ್ ಮುಂಭಾಗದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಮೂಡುಬಿದಿರೆ ಧವಳ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಸಂತೋಷ್ ಶೆಟ್ಟಿ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದರ ಬಗ್ಗೆ ವಿಷಯ ನಿರ್ವಹಿಸಿದರು. ‌

ಮುಖ್ಯ ಅತಿಥಿಗಳಾಗಿ ಮಂಗಳೂರು ದ.ಕ. ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಪದ್ಮನಾಭ ಅರ್ಕಜೆ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ, ಉಜಿರೆ ಬೆಳ್ತಂಗಡಿ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಸಾವಿತ್ರಿ ರೈ, ಜಿಲ್ಲಾ ಸಹಕಾರ ಸಂಘದ ಉಪನಿಬಂಧಕ ರಮೇಶ್ ಎಚ್.ಎನ್., ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ.ರಘು, ಬೆಳ್ತಂಗಡಿ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ಸತೀಶ್ ಕೆ., ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಯರಾಜ ಹೆಗ್ಡೆ ಪಿ., ಬಾರ್ಯ ಗ್ರಾ.ಪಂ. ಅಧ್ಯಕ್ಷ ಉಸ್ಮಾನ್ ಪಿ.ಕೆ. ಹಾಗೂ ಬೆಳ್ತಂಗಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಪ್ಯಾಕ್ಸ್ ಗಳ ಅಧ್ಯಕ್ಷರಾದ ವೇಣೂರಿನ ಸುಂದರ ಹೆಗ್ಡೆ, ತಣ್ಣೀರುಪಂತ ಜಗದೀಶ್ ಶೆಟ್ಟಿ ಮೈರ, ಪೆರಾಡಿಯ ಸತೀಶ್ ಕಾಶಿಪಟ್ಣ, ಅಳದಂಗಡಿ ರಾಕೇಶ್ ಹೆಗ್ಡೆ, ಪದ್ಮುಂಜ ರಕ್ಷಿತ್ ಶೆಟ್ಟಿ, ತೆಕ್ಕಾರಿನ ಅಬ್ದುಲ್ ರಜಾಕ್, ಹತ್ಯಡ್ಕ ರಾಘವೇಂದ್ರ ನಾಯಕ್ , ಧರ್ಮಸ್ಥಳ ಪ್ರೀತಂ ಡಿ‌ ಉಪಸ್ಥಿತರಿದ್ದರು. ಪುಷ್ಯ ಪ್ರಸನ್ನ ಬೋಳ್ನಡ್ಕ ಪ್ರಾರ್ಥಿಸಿದರು.ನಿದೇರ್ಶಕ ರಾಜೇಶ್ ರೈ ಹೆನ್ನಡ್ಕ ಸ್ವಾಗತಿಸಿದರು.‌ ಉಪಾಧ್ಯಕ್ಷ ಶಿವರಾಮ,
ನಿದೇರ್ಶಕರಾದ ಪ್ರಸನ್ನ ಯನ್, ಮೋಹನ್ ಗೌಡ, ಪ್ರತಾಪ್ ಯಂ, ಸುರೇಶ್, ಶೇಷಪ್ಪ ಸಾಲಿಯಾನ್, ಅಶ್ರಫ್ ಯಚ್, ಸವಿತಾ, ಲಿಡಿಯ ಬ್ರಾಗ್ಸ್, ಪಾಶ್ವನಾಥ್ ಜೈನ್, ವೃತಿಪರ ನಿರ್ದೇಶಕರಾದ ಅರುಣ್ ಬಂಗೇರಾ ಮತ್ತು ಚಂದ್ರಶೇಖರ, ದ. ಕ. ಜಿಲ್ಲಾ ಕೇಂದ್ರ ಸ. ಬ್ಯಾಂಕಿನ ಪ್ರತಿನಿಧಿ ಸಿರಾಜುದೀನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಗೌಡ ಟಿ., ಪಿಲಿಗೂಡು ಶಾಖಾ ವ್ಯವಸ್ಥಾಪಕ ಶಶಿಧರ್ ಅಡಪ, ಸಿಬ್ಬಂದಿಗಳಾದ ರೋಹಿಣಿ ಗಿರೀಶ್, ರತ್ನಾವತಿ ಬಾಲಕೃಷ್ಣ, ನವೀನ್ ಕುಮಾರ್ ಎಂ., ಪ್ರವೀಣ್ ಬಿ., ವೆಂಕಪ್ಪ, ರಕ್ಷಿತ್, ಧನುಷ್ ಬಿ., ಅನುಷಾ ಪ್ರವೀಣ್ ಹಾಗೂ ಅಬ್ಬೂಕರ್ ಮುರುಗೋಳಿ ಸಹಕರಿಸಿದರು. ಕಳಿಯ ಪ್ಯಾಕ್ಸ್ ನ ವಸಂತ ಮಜಲು, ವಿವಿಧ ಪ್ಯಾಕ್ಸ್ ಗಳ ಸಿಇಒಗಳು ಹಾಜರಿದ್ದರು.

p>

LEAVE A REPLY

Please enter your comment!
Please enter your name here