ಧರ್ಮಸ್ಥಳ: ಗ್ರಾಮ ಪಂಚಾಯತ್, ಅರಿವು ಕೇಂದ್ರ, ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಸಹಭಾಗಿತ್ವದಲ್ಲಿ ಮಕ್ಕಳ ದಿನಾಚರಣೆ

0

ಧರ್ಮಸ್ಥಳ: ನ.14ರಂದು ಗ್ರಾಮ ಪಂಚಾಯತ್, ಧರ್ಮಸ್ಥಳ ಅರಿವು ಕೇಂದ್ರ, ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಸಹಭಾಗಿತ್ವದಲ್ಲಿ ಜವಾಹರಲಾಲ್ ನೆಹರುರವರ ಜನ್ಮದಿನದ ಸವಿ ನೆನಪಿಗಾಗಿ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ” ಮಕ್ಕಳ ದಿನಾಚರಣೆ”ಯನ್ನು ನೆಹರೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಮ್ ನೆಹರುರವರ ಜೀವನ ಸಾಧನೆಯ ಬಗ್ಗೆ ತಿಳಿಸಿದರು. ಎಮ್ ಎಸ್ ಡಬ್ಲ್ಯೂ ವಿದ್ಯಾರ್ಥಿಗಳು ರಸಪ್ರಶ್ನೆ, ಗುಂಪು ಚರ್ಚೆ, ಸಂಗೀತಾ ಕುರ್ಚಿ ಮುಂತಾದ ಆಟಗಳನ್ನು ಆಡಿಸಿದರಲ್ಲದೆ, ವಿಜೇತರಾದ ಮಕ್ಕಳಿಗೆ ಬಹುಮಾನವಿತ್ತು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ರೀನಾ, ಲೆಕ್ಕ ಸಹಾಯಕಿ ಪ್ರಮೀಳಾ, ಶಿಕ್ಷಕಿ ಪೂರ್ಣಿಮಾ, ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ 38 ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕಿ ಧನ್ಯವಾದವಿತ್ತು, ಸಿಹಿ ತಿಂಡಿ ಹಂಚಲಾಯಿತು.

p>

LEAVE A REPLY

Please enter your comment!
Please enter your name here