ಬೆಳ್ತಂಗಡಿ: ಪಶ್ಚಿಮಘಟ್ಟಗಳ ಸಂರಕ್ಷೆಣೆಗೆ ಕಸ್ತೂರಿರಂಗನ್ ವರದಿ ಹಾಗು ಅದರ ಆಧಾರವಾಗಿರುವ ಗಾಡ್ಗಿಲ್ ವರದಿಗಳನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಅಳವಡಿಸಲು ಅಧಿಕಾರಿಗಳು ವಿಫಲರಾಗಿದ್ದು, ಅದರ ಪರಿಣಾಮವಾಗಿ ನಮ್ಮ ಕೃಷಿಭೂಮಿಗಳನ್ನು ಅರಣ್ಯ ಎಂದು ತಪ್ಪಾಗಿ ಮಾಪನ ಮಾಡಿದ್ದಾರೆ. ಆತಂಕಗಳಿಂದ ರೈತರು ಭೂಮಿಯ ಮೇಲಿನ ತಮ್ಮ ಹಕ್ಕು ಸಂರಕ್ಷೆಣೆಗೆ ನಡೆಸುವ ಹೋರಾಟಕ್ಕೆ ಮಲೆನಾಡು ಸಂರಕ್ಷಣ ವೇದಿಕೆಗೆ ಸಾರ್ವಜನಿಕರು ಬೆಂಬಲ ನೀಡಬೇಕಾಗಿ ವಿನಂತಿ.
ಇದು ನಮ್ಮ ಅಳಿವಿನ ಉಳಿವಿನ ಹೋರಾಟ. ಮಲೆನಾಡಿನ ಜನತೆ ಎಚ್ಚೆತ್ತು, ಜಾತಿ, ಧರ್ಮ, ಪಂಗಡ, ಪಕ್ಷಗಳನ್ನು ಮರೆತು ನಮ್ಮ ಮಣ್ಣಿನ ಸಂರಕ್ಷೆಣೆಗೆ ಹೋರಾಟ ಮಾಡೋಣ ಮಲೆನಾಡಿನ ಮಣ್ಣನ್ನು ಕೃಷಿ ರೀತಿಗಳನ್ನು ಸರಿಯಾಗಿ ತಿಳಿಯದೆ ಅವೈಜ್ಞಾನಿಕ ಹಾಗು ಜನಹಿತವಲ್ಲದ ಕಸ್ತೂರಿರಂಗನ್ ವರದಿ ತಡೆಹಿಡಿದು ವಜಾಮಾಡುವ ತನಕ ಈ ಹೋರಾಟವನ್ನು ಮುನ್ನಡೆಸೋಣ. ನವೆಂಬರ್ ಹದಿನೈದನೆ ತಾರೀಕಿನ ಗುಂಡ್ಯದಲ್ಲಿ ನಡೆಯಲಿರುವ ಬ್ರಹತ್ ಸಮ್ಮೇಳನಕ್ಕೆ ಸಾರ್ವಜನಿಕರೆಲ್ಲರು ಭಾಗವಹಿಸಿ ನಮ್ಮಹಕ್ಕು ಸಂರಕ್ಷಣೆಗಾಗಿ ಹೋರಾಡೋಣ ಎಂದು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಮಾಧ್ಯಮ ನಿರ್ದೇಶಕ ಫಾ| ಸುನಿಲ್ ಐಸಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.