ಬೆಳ್ತಂಗಡಿ: ವೆನ್ಲಾಕ್ ನ ಹೊಸ ಸರ್ಜಿಕಲ್ ಬ್ಲಾಕ್ ನಲ್ಲಿ ನೂತನ ಶಸ್ತ್ರಚಿಕಿತ್ಸಾ ಕೊಠಡಿ ಕಾರ್ಯಾರಂಭ

0

ಬೆಳ್ತಂಗಡಿ: ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇಲ್ಲಿಯ ಸ್ಮಾರ್ಟ್ ಸಿಟಿಯಿಂದ ಆದ ಹೊಸ ಶಸ್ತ್ರಚಿಕಿತ್ಸಾ ಕಟ್ಟಡ ಆಗಸ್ಟ್ 15ರಂದು ಮಾನ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳಿಂದ ಉದ್ಘಾಟನೆಗೊಂಡಿತ್ತು. ಸೆಪ್ಟೆಂಬರ್ 2ರಂದು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಹಾಗೂ ಸೆಪ್ಟೆಂಬರ್ 11ರಂದು ಕ್ಷ ಕಿರಣ ವಿಭಾಗ ಪ್ರಾರಂಭವಾಗಿತ್ತು. ಸೆಪ್ಟೆಂಬರ್ 18ರಂದು ತುರ್ತು ಚಿಕಿತ್ಸಾ ವಿಭಾಗ ಹೊಸ ಕಟ್ಟಡದಲ್ಲಿ ಪ್ರಾರಂಭಿಸಲಾಯಿತು. ನವೆಂಬರ್ 7ರಂದು ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಹೊಸ ಕಟ್ಟಡದಲ್ಲಿ ಶಸ್ತ್ರ ಚಿಕಿತ್ಸಾ ಕೊಠಡಿ ಪ್ರಾರಂಭಿಸಲಾಯಿತು ಹಾಗೂ ಮೊದಲನೇ ದಿನವೇ 7 ಶಸ್ತ್ರಚಿಕಿತ್ಸೆ ಮಾಡಲಾಯಿತು. ಡಾ ಸದಾನಂದ ಪೂಜಾರಿ ಹಾಗೂ ಆಸ್ಪತ್ರೆ ಸಿಬ್ಬಂದಿ ತಂಡ ಕಾರ್ಯಾರಂಭಕ್ಕೆ ಸಹಕಾರ ಮಾಡಿದ್ದಾರೆ.

ಮೊದಲ ದಿನವೇ ಡಾ. ಸುರೇಶ ಪೈ ತಂಡದವರಿಂದ ಥೋರಾಸಿಕ್ ಸರ್ಜರಿ ಮಾಡಲಾಯಿತು. ಡಾ. ಹೇಮಲತಾ ಹಾಗೂ ಡಾ. ವಿಶ್ವ ವಿಜೇತ ತಂಡವು 5 ಮೂಗಿನ ಶಸ್ತ್ರಚಿಕಿತ್ಸೆ ಮಾಡಿದರು. ಡಾ. ಅರ್ಜುನ್ ಶೆಟ್ಟಿ ತಂಡವು ಮೆದುಳಲ್ಲಿ ರಕ್ತ ಹೆಪ್ಪು ಗಟ್ಟಿದ ರೋಗಿಗೆ ತುರ್ತು ಶಸ್ತ್ರ ಚಿಕಿತ್ಸೆ ಮಾಡಿದರು. ಡಾ. ಸುರೇಶ ಭಟ್ ಅರವಳಿಕೆ ತಂಡದ ಮುಖ್ಯಸ್ಥರಾಗಿದ್ದು ಎಲ್ಲಾ ಶಸ್ತ್ರ ಚಿಕಿತ್ಸೆ ಯಾವುದೇ ತೊಂದರೆ ಆಗದ ಹಾಗೆ ನೆರವೇರಿಸಿದರು. ನರ್ಸಿಂಗ್ ಅಧಿಕಾರಿಗಳಾದ ವಿ.ಎಂ. ಶೈಲಾ, ಜೆಸಿಂತ, ಅಶ್ವಿನಿ, ರೇಷ್ಮಾ, ಅಲ್ವಿನ್ ಮೆನೇಜ್ಸ್ ಇದ್ದರು. OT ಟೆಚ್ನಿಷಿಯನ್ ಆದ ಧನುಷ್, ಶ್ರದ್ದಾ, ಹೇಮಾಶ್ರೀ, ಅರ್ಪಿತಾ, ಪ್ರದೀಪ್ ಹಾಗೂ ಡಿ ಗ್ರೂಪ್ ನೌಕರರಾದ ಜಯಪ್ರಕಾಶ್ ಮತ್ತು ಹರೀಶ್ ಇದ್ದರು.

ಅದೇ ರೀತಿ ಡಿಸೆಂಬರ್ 1ರಂದು ಶಸ್ತ್ರ ಚಿಕಿತ್ಸಾ ಹಾಗೂ ಮೂಳೆ ವಿಭಾಗದ ಶಸ್ತ್ರ ಚಿಕಿತ್ಸಾ ಕೊಠಡಿ ಪ್ರಾರಂಭವಾಗಲಿದ್ದು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ವೆನ್ಲಾಕ್ ಆಸ್ಪತ್ರೆಯ ಆರ್.ಎಮ್.ಓ. ಡಾ. ಸುಧಾಕರ್ ಹಾಗೂ ಕೆಎಂಸಿ ವೈದ್ಯರು, ಕಛೇರಿ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು, ನರ್ಸಿಂಗ್ ವಿಭಾಗದ ಅಧೀಕ್ಷಕರು, ಫಾರ್ಮಸಿ, ಕ್ಷ ಕಿರಣ, ವಾಹನ ಚಾಲಕರು, ಸಂಬಂಧ ಪಟ್ಟ ಎಲ್ಲಾ ವಿಭಾಗದವರು, ಡಿ ಗ್ರೂಪ್ ನೌಕರರು ಮತ್ತು ಹೌಸ್ ಕೀಪಿಂಗ್ ವಿಭಾಗದವರು ಹೊಸ ಕಟ್ಟಡದ ಕಾರ್ಯರಂಭಕ್ಕೆ ಕಾರಣಕರ್ತರಾಗಿದ್ದಾರೆ.

ಈ ಕಾರ್ಯದಲ್ಲಿ ಜಿಲ್ಲಾಡಳಿತ, ಎಲ್ಲಾ ಜನಪ್ರತಿನಿಧಿಗಳು, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗಳು, ವೆನ್ಲಾಕ್ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳ ಸಹಕಾರ ಬಹು ಮುಖ್ಯವಾಗಿದೆ. ರಕ್ಷಾ ಸಮಿತಿ ಸದಸ್ಯರಾದ ಅನಿಲ್, ಸಲೀಂ ಹಾಗೂ ಶಶಿಧರ್ ಹೊಸ ಕಟ್ಟಡಕ್ಕೆ ಸ್ವಂತ ಹಣದಿಂದ ಹಾಗೂ ದಾನಿಗಳ ನೆರವಿನಿಂದ ಕುಡಿಯುವ ನೀರಿನ ಫಿಲ್ಟರ್ ವ್ಯವಸ್ಥೆ ಮಾಡಿದ್ದಾರೆ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಶಸ್ತ್ರ ಚಿಕಿತ್ಸಾ ಕೊಠಡಿಗಳು ಹಾಗೂ ವಾರ್ಡ್ ಗಳು ಈ ಭಾಗದ ಬಡವರಿಗೆ ವರದಾನ ಆಗಲಿದೆ ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ಶಿವಪ್ರಕಾಶ್ ಮಾಹಿತಿ ನೀಡಿದ್ದಾರೆ.

p>

LEAVE A REPLY

Please enter your comment!
Please enter your name here