ಬೆಳ್ತಂಗಡಿ: ನ.10 ಆದಿತ್ಯವಾರ ಪೂರ್ವಾಹ್ನ 9:30ರಿಂದ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಅಂಬೇಡ್ಕರ್ ಭವನದಿಂದ ಸರಕಾರಿ ಸಾರ್ವಜನಿಕ ಸಮುದಾಯ ಆಸ್ಪತ್ರೆಯ ತನಕ ರಾಜ ಮಾರ್ಗದ ಇಕ್ಕಡೆಗಳಲ್ಲಿ ಬೆಳ್ತಂಗಡಿ ಮಾಜಿ ಸೈನಿಕರ ಸಂಘದವರ ನೇತೃತ್ವದಲ್ಲಿ ಹಾಗೂ ಗುರುವಾಯನಕೆರೆ ಎಕ್ಸಲ್ ಪಿ. ಯು. ಕಾಲೇಜ್ ಇವರ ಸಹಯೋಗದೊಂದಿಗೆ ಶ್ರಮದಾನದ ಮೂಲಕ ಶುಚಿತ್ವ ಅಭಿಯಾನ ನಡೆಯಲಿರುವುದು ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಹಮ್ಮದ್ ರಫಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.