ಕಾಯರ್ತಡ್ಕ: ಆನ್ ಲೈನ್ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ ವಂಚನೆ, ಕೇಸು ದಾಖಲು

0

ಕಾಯರ್ತಡ್ಕ: ಆನ್ ಲೈನ್ ಕೆಲಸ ಕೊಡಿಸುವುದಾಗಿ ನಂಬಿಸಿ ಕಾಯರ್ತಡ್ಕದ ಮಹಿಳೆಯೊಬ್ಬರಿಂದ 4.25 ಲಕ್ಷ ಹಣ ಪಡೆದು ವಂಚಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಯರ್ತಡ್ಕ ನಿವಾಸಿ ಮಹಿಳೆಯೊಬ್ಬರಿಗೆ ಅ. 9ರಂದು ಅಪರಿಚಿತ ವ್ಯಕ್ರಿಯೊಬ್ಬ ಕರೆ ಮಾಡಿ ಆನ್ಲೈನ್ ಕೆಲಸದ ಆಫರ್ ನೀಡಿದ್ದು, ಅದರಂತೆ ಮಹಿಳೆ ಕೆಲಸ ಆರಂಭಿಸಿದ್ದು ಆ ಬಳಿಕ ಆರೋಪಿಗಳು ವಿವಿಧ ಕಾರಣಗಳನ್ನು ತಿಳಿಸಿ ಅವರಿಂದ ಬೇರೆ ಬೇರೆ ಖಾತೆಗಳಿಗೆ ಆನ್ ಲೈನ್ ಮೂಲಕ 4,25,934 ರೂ ಹಣವನ್ನು ವರ್ಗಾಯಿಸಿಕೊಂಡು ಬಳಿಕ ಕರೆ ಸ್ವೀಕರಿಸದೆ ವಂಚಿಸಿದ್ದು, ಈ ಬಗ್ಗೆ ವಂಚನೆಗೆ ಒಳಗಾದ ಮಹಿಳೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.

p>

LEAVE A REPLY

Please enter your comment!
Please enter your name here