ನಾರಾವಿ: ಸಂತ ಅಂತೋನಿ ಪದವಿ ಕಾಲೇಜಿನ ಎನ್.ಎಸ್.ಎಸ್. ಕಾರ್ಯ ಚಟುವಟಿಕೆಗಳ ಉದ್ಘಾಟನೆ- ಮನೋಬಲ ನೀಡುವಲ್ಲಿ ಎನ್.ಎಸ್.ಎಸ್. ನ ಪಾತ್ರ ಮಹತ್ವದ್ದು: ಪ್ರೊ.ಸಂತೋಷ್ ಶೆಟ್ಟಿ

0

ನಾರಾವಿ: “ಪರಿಸರವನ್ನ ಸ್ವಚ್ಛಗೊಳಿಸುವುದು ಮಾತ್ರ ಎನ್.ಎಸ್.ಎಸ್.ನ ಕೆಲಸವಲ್ಲ. ಮನುಷ್ಯನ ಮಾನಸಿಕ ಕೊಳೆಯನ್ನು ತೊಡೆದು ಅರಿವನ್ನು ಮೂಡಿಸಿ ಮನೋಬಲವನ್ನು ನೀಡುವುದೇ ಎನ್.ಎಸ್.ಎಸ್. ವಿದ್ಯಾರ್ಥಿಗಳಲ್ಲಿ ತನ್ನತನವನ್ನು ಬೆಳೆಸಿ, ಪ್ರೇರೇಪಿಸಿ ಸುಂದರ ವ್ಯಕ್ತಿತ್ವವನ್ನು ನೀಡುವ ಕಲೆಗಾರಿಕೆ ಇರುವ ಏಕೈಕ ಸಂಸ್ಥೆ ಎನ್.ಎಸ್.ಎಸ್. ” ಎಂದು ಶ್ರೀ ಧವಳ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಸಂತೋಷ್ ಶೆಟ್ಟಿ ಅಭಿಪ್ರಾಯಪಟ್ಟರು . ಅವರು ನಾರಾವಿ ಸಂತ ಅಂತೋನಿ ಪದವಿ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ 2024-25ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ವಂ.ಡಾ.ಆಲ್ವಿನ್ ಸೆರಾವೋ “ಎನ್.ಎಸ್.ಎಸ್.ನಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡವರಲ್ಲಿ ಭೇದಭಾವ ಇರೋದಿಲ್ಲ. ನೈತಿಕತೆ ಹಾಗೂ ಆರೋಗ್ಯ ಪೂರ್ಣ ಬದುಕು ಅವರಿಗೆ ಒಲಿಯುತ್ತದೆ” ಎಂದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ದಿನೇಶ್ ಬಿ.ಕೆ ಬಳಂಜ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನ ಸ್ವಾಗತಿಸಿದರು. ಕಾರ್ಯದರ್ಶಿ ರಶ್ವಿತಾ ಧನ್ಯವಾದವಿತ್ತರು, ಸ್ವಯಂಸೇವಕಿ ಅನ್ವಿತಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಉಪಪ್ರಾಂಶುಪಾಲ ಸಂತೋಷ್ ಸಲ್ಡಾನ, ಉಪನ್ಯಾಸಕರಾದ ಅವಿಲ್ ಮೋರಸ್, ಸಂತೋಷ್ ಈದು, ಅವಿನಾಶ್ ಲೋಬೋ, ಅನಿತಾ ಡಿ’ಸೋಜಾ ಕಾರ್ಯಕ್ರಮಕ್ಕೆ ಸಹಕರಿಸಿದರು.

p>

LEAVE A REPLY

Please enter your comment!
Please enter your name here