




ಶಿಶಿಲ: ಕಸ್ತೂರಿರಂಗನ್ ವರದಿಯ ವಿರೋಧಿಸಿ ನ.15ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೃಹತ್ ಪ್ರತಿಭಟನೆಯು ನಡೆಯಲಿದೆ. ಇದರ ಪೂರ್ವಭಾವಿ ಸಭೆಯು ಶಿಶಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅ.17ರಂದು ನಡೆಯಿತು.


ಸಭೆಯಲ್ಲಿ ಕಸ್ತೂರಿ ರಂಗನ್ ಹೋರಾಟಗಾರ ಕಿಶೋರ್ ಶಿರಾಡಿ ಉಪಸ್ಥಿತರಿದ್ದು, ಕಸ್ತೂರಿ ರಂಗನ್ ವರದಿಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಶಿಶಿಲ ಗ್ರಾ.ಪಂ ಅಧ್ಯಕ್ಷ ಸುಧೀನ್ ಡಿ., ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಮಾಜಿ ಕಾರ್ಯದರ್ಶಿ ಕರುಣಾಕರ ಶಿಶಿಲ, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕರಾದ ಕೊರಗಪ್ಪ ಗೌಡ, ಕುಶಾಲಪ್ಪ ಗೌಡ, ಶಿಶಿಲ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಂತೋಷ್ ಹಾಗೂ ಶಿಶಿಲ ಗ್ರಾಮಸ್ಥರು ಉಪಸ್ಥಿತರಿದ್ದರು.









