ಬೆಳ್ತಂಗಡಿ: ಆಯುಷ್ ಫೆಡರೆಷನ್ ಆಫ್ ಇಂಡಿಯಾ(ಎ ಎಫ್ ಐ), ಕರ್ನಾಟಕ ಇದರ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅ.13ರಂದು ಉಜಿರೆಯ ಓಷಿಯನ್ ಪರ್ಲ್ ಹೋಟೆಲ್ ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ಎ ಎಫ್ ಐ ಘಟಕದ ನೂತನ ಅಧ್ಯಕ್ಷೆ ಡಾ.ಸುಷ್ಮಾ ಡೋಂಗ್ರೆ ವಹಿಸಿದ್ದರು.
ಬೆಳ್ತಂಗಡಿ ತಾಲೂಕಿನ ಎಲ್ಲಾ ಆಯುಷ್ ವೈದ್ಯರುಗಳ ಸಂಪೂರ್ಣ ಸಹಕಾರವನ್ನು ಮುಂದಿನ ಅವಧಿಯ ಕಾರ್ಯಕ್ರಮಗಳಿಗೆ ನೀಡುವಂತೆ ವಿನಂತಿಸಿಕೊಂಡರು. ಪದಗ್ರಹಣ ಸಭಾರಂಭವನ್ನು ಎ ಎಫ್ ಐ ದಕ್ಷಿಣಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮಂಗಳೂರಿನ ಡಾ.ಕೃಷ್ಣ ಗೋಖಲೆ ನಿರ್ವಹಿಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಕೆ.ಎಂ.ಸಿ ಆಸ್ಪತ್ರೆಯ ಖ್ಯಾತ ವೈದ್ಯರೂ, ಅತ್ತಾವರ ಕೆ ಎಂ ಸಿ ಯ ಮುಖ್ಯ ವೈದ್ಯಾಧಿಕಾರಿಯೂ ಆಗಿರುವ ಡಾ.ಚಕ್ರಪಾಣಿ ಹಾಗೂ ಕೆ ಎಂ ಸಿ ಆಸ್ಪತ್ರೆಯ ಖ್ಯಾತ ಸೊಂಟ ಮತ್ತು ಮಂಡಿ ಶಸ್ತ್ರ ಚಿಕಿತ್ಸಾ ತಜ್ಞರಾಗಿರುವ ಡಾ.ಯೋಗೀಶ್ ಕಾಮತ್ ಆಗಿಮಿಸಿದ್ದರು. ತಾಲೂಕಿನ ಹಿರಿಯ ವೈದ್ಯರಾಗಿರುವ ಡಾ.ಮೋಹನ್ ದಾಸ್ ಗೌಡ ಕೊಕ್ಕಡ ಹಾಗೂ ಹಿಂದಿನ ಅವಧಿಯ ಕಾರ್ಯದರ್ಶಿಗಳಾಗಿದ್ದ ಅಳದಂಗಡಿಯ ಡಾ.ಹರಿಪ್ರಸಾದ್ ಸುವರ್ಣ ಶುಭಹಾರೈಸಿದರು.
ಸಭಾಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಹೋಮಿಯೋಪತಿ ವೈದ್ಯೆ ಡಾ. ಗ್ರೆಟ್ಟಾ ಲೋಬೋ ಸ್ವಾಗತಿಸಿ, ಡಾ.ಪ್ರದೀಪ್ ನಾವೂರು ವಂದಿಸಿದರು. ನ್ಯಾಚುರೋಪತಿ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಡಾ. ಚಾಂದಿನಿ ಕಾರ್ಯಕ್ರಮವನ್ನು ನಿರೂಪಿಸಿದರು. ನೂತನ ಘಟಕದ ಅಧ್ಯಕ್ಷರಾಗಿ ಡಾ. ಸುಷ್ಮಾ ಡೋಂಗ್ರೆ, ಕಾರ್ಯದರ್ಶಿಯಾಗಿ ಡಾ. ಪದ್ರೀಪ್, ಉಪಾಧ್ಯಕ್ಷರಾಗಿ ಡಾ. ಸುಜಾತ ಸರಳಾಯ, ಡಾ. ಶಿವಾನಂದ ಸ್ವಾಮಿ ಹಾಗೂ ಡಾ. ಗ್ರೆಟ್ಟಾ ಲೋಬೋ, ಜೊತೆಕಾರ್ಯದರ್ಶಿಯಾಗಿ ಡಾ. ಗಣೇಶ್ ಪ್ರಸಾದ್ ಕೊಕ್ಕಡ, ಕೋಶಾಧಿಕಾರಿಯಾಗಿ ಡಾ. ಅಮಿತ್ ಖಾಡಿಲ್ಕರ್ ಜವಾಬ್ದಾರಿಯನ್ನು ವಹಿಸಿಕೊಂಡರು.
ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಆಯುಷ್ ವೈದ್ಯರುಗಳು ಭಾಗವಹಿಸಿದ್ದರು. ನಂತರ ಕೆ ಎಂ ಸಿ ಯ ಡಾ. ಚಕ್ರಪಾಣಿ ಹಾಗೂ ಡಾ. ಯೋಗೀಶ್ ಕಾಮತ್ ವೈದ್ಯರುಗಳಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಎ ಎಫ್.ಐ ಘಟಕದ ಜಿಲ್ಲಾ ಕಾರ್ಯದರ್ಶಿ ಡಾ.ಧನಂಜಯ್, ದಕ್ಷಿಣ ಕನ್ನಡ ಆಯುಷ್ ಫೆಡರೆಷನ್ ಪೂರ್ವಾಧ್ಯಕ್ಷರಾಗಿದ್ದ ಡಾ.ನಾರಾಯಣ ಅಸ್ರ ಪುತ್ತೂರು ಉಪಸ್ಥಿತರಿದ್ದರು.