ಪುತ್ತೂರು: ಪ್ರತೀ ಹಬ್ಬಗಳು ಹಾಗೂ ವಿಶೇಷ ದಿನಾಚರಣೆಗಳ ಸಂದರ್ಭಗಳಲ್ಲಿ ತನ್ನ ಚಿನ್ನದ ಮಳಿಗೆಗಳಲ್ಲಿ ಗ್ರಾಹಕರಿಗಾಗಿ ವೈವಿಧ್ಯಮಯ ಕೊಡುಗೆಗಳನ್ನು ನೀಡುತ್ತಿರುವ, ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಕೊಡುಗೆಗಳೊಂದಿಗೆ ನಡೆಯಲಿರುವ ಸ್ವರ್ಣ ಹಬ್ಬಕ್ಕೆ ಅ.7ರಂದು ಚಾಲನೆ ದೊರೆಯಿತು.
ಸುಶ್ರುತ ಆಯುರ್ವೇದ ಆಸ್ಪತ್ರೆಯ ಡಾ.ರವಿಶಂಕರ್ ಪೆರ್ವಾಜೆ ದೀಪ ಬೆಳಗಿಸಿ ಉದ್ಘಾಟಿಸಿ, ಸ್ವರ್ಣ ಹಬ್ಬಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಚಿನ್ನಾಭರಣ ಕ್ಷೇತ್ರದಲ್ಲಿ ಪರಂಪರೆ ಹೊಂದಿರುವ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸ್ವರ್ಣ ಹಬ್ಬ ನಡೆಯುತ್ತಿದೆ.ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿ ಶುಭಹಾರೈಸಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯರವರು ಮಾತನಾಡಿ, ಮಳಿಗೆಯಲ್ಲಿ ಈ ವರ್ಷ ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಕೊಡುಗೆಗಳನ್ನು ಪ್ರತ್ಯೇಕವಾಗಿ ಉತ್ತಮವಾದ ವಿಶೇಷ ಕೊಡುಗೆಗಳನ್ನು ನೀಡಲಾಗುವುದು.ಅ.7ರಿಂದ 13ರ ತನಕ ನಡೆಯಲಿರುವ ಸ್ವರ್ಣಹಬ್ಬದಲ್ಲಿ ಚಿನ್ನ ಬೆಳ್ಳಿ ಹಾಗೂ ವಜ್ರಗಳ ಖರೀದಿಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದ್ದು ಗ್ರಾಹಕರು ಸಹಕರಿಸಿ, ಯಶಸ್ವಿಗೊಳಿಸುವಂತೆ ವಿನಂತಿಸಿದರು.ಡಾ.ರವಿಶಂಕರ್ ಪೆರ್ವಾಜೆಯವರ ಪತ್ನಿ ಜಯಶ್ರೀ ಆರ್ ಪೆರ್ವಾಜೆ ಹಾಗೂ ಬಲರಾಮ ಆಚಾರ್ಯರವರ ಪತ್ನಿ ರಾಜಿ ಬಲರಾಮ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಸ್ಥೆಯ ಸಿಬ್ಬಂದಿ ನರೇಶ್ ಸ್ವಾಗತಿಸಿ, ವಂದಿಸಿದರು.
ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವಾ ಬದ್ಧತೆಯೊಂದಿಗೆ ಆಭರಣ ಪ್ರಿಯರ ವಿಶ್ವಾಸಕ್ಕೆ ಪಾತ್ರವಾಗಿರುವ ಜಿ.ಎಲ್. ಅಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ಅತ್ಯಪೂರ್ವ ಸಂಗ್ರಹವಿದೆ.ಗ್ರಾಹಕರು ತಮ್ಮ ಮನಸ್ಸಿಗೊಪ್ಪುವ ಆಭರಣಗಳನ್ನು ಸಾವಕಾಶವಾಗಿ ವೀಕ್ಷಿಸಿ-ಯೋಚಿಸಿ ಖರೀದಿಸಲು ಅಗತ್ಯವಾಗಿರುವ ವಿಶಾಲವಾದ ಸ್ಥಳಾವಕಾಶ ಮತ್ತು ಉತ್ತಮ ಪಾಕಿಂಗ್ ವ್ಯವಸ್ಥೆಯೂ ಇದ್ದು, ಗ್ರಾಹಕರ ಚಿನ್ನಾಭರಣ ಖರೀದಿಯ ಸಮಯವನ್ನು ಇನ್ನಷ್ಟು ಆರಾಮದಾಯಕಗೊಳಿಸುವಂತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸ್ವರ್ಣಹಬ್ಬದಲ್ಲಿ ವಿಶೇಷವಾಗಿ ಚಿನ್ನಾಭರಣ ಖರೀದಿಗೆ ಪ್ರತೀ ಗ್ರಾಂ ಮೇಲೆ ರೂ.200ರವರೆಗೆ ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ರೂ.5,000ದವರೆಗೆ ರಿಯಾಯಿತಿ ಹಾಗೂ ಬೆಳ್ಳಿಯ ಆಭರಣಗಳ ಮೇಲೆ ಪ್ರತೀ ಕೆ.ಜಿ.ಗೆ ರೂ.2,000ದವರೆಗೆ ರಿಯಾಯಿತಿಯನ್ನು ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದಾಗಿದೆ.ಇಷ್ಟು ಮಾತ್ರವಲ್ಲದೇ ಚಿನ್ನಾಭರಣಗಳ ಖರೀದಿಗೆ ವಿ.ಎ.ಶೇ.8ನಿಂದ ಪ್ರಾರಂಭಗೊಳ್ಳಲಿದೆ.