ಉಜಿರೆ: ಶರನ್ನವರಾತ್ರಿಯ ಶುಭ ಸಂದರ್ಭದ ಮೊದಲ ದಿನ ಅ.3ರಂದು ಉಜಿರೆ ಶ್ರೀ ಮಹಮ್ಮಾಯಿ(ಮಾರಿಗುಡಿ) ದೇವಸ್ಥಾನದಲ್ಲಿ “ಉಜಿರೆದಪ್ಪೆ ಮಮ್ಮಾಯಿ”ತುಳು ಭಕ್ತಿ ಸುಗಿಪು ಧ್ವನಿಮುದ್ರಿಕೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರವಿ ಚೆಕ್ಕಿತ್ತಾಯ, ಭರತ್ ಕುಮಾರ್, ರಾಮಚಂದ್ರ ಶೆಟ್ಟಿ, ಬಾಬು ಮೊಗೇರ ಮೊದಲಾದವರು ಉಪಸ್ಥಿತರಿದ್ದರು.
ಬನಶಂಕರಿ ಕ್ರಿಯೇಷನ್ಸ್ ಸಿದ್ದಗೊಳಿಸಿ ಯುಟ್ಯೂಬ್ ಚಾನಲ್ ನಲ್ಲಿ ಬಿತ್ತರಿಸುತ್ತಿರುವ “ಉಜಿರೆದಪ್ಪೆ ಮಮ್ಮಾಯಿ” ತುಳು ಭಕ್ತಿಗೀತೆಗಳಿಗೆ ಪಾರ್ಶ್ವನಾಥ ಜೈನ್ ಹೆರತ್ಯಾರು ಸಾಹಿತ್ಯ ರಚಿಸಿದ್ದು, ಉಜಿರೆಯ ಕೇಶವ ದೇವಾಂಗ ರಾಗಸಂಯೋಜಿಸಿ ಹಾಡಿದ್ದಾರೆ.
ಸನ್ವಿತ್ ಎಸ್ ನಿರ್ಮಾಣ, ಗುರುವಾಯನಕೆರೆಯ ಸೌಂಡ್ ಮಾಸ್ಟರ್ ರೆಕಾರ್ಡಿಂಗ್ ಗೆ ಸುರೇಂದ್ರ ಜೈನ್ ನಾರಾವಿ ಸಲಹೆ ಮತ್ತು ಸಹಕಾರ ನೀಡಿದ್ದಾರೆ.
ಸಹನ್ ಎಂ ಎಸ್ ಉಜಿರೆ ಸಂಕಲನದಲ್ಲಿ ಉಜಿರೆಯ ಇಶಾನಿ ಸ್ಟುಡಿಯೋ ವಿಡಿಯೋಗ್ರಫಿ ಮಾಡಿದ್ದು, ಪ್ರಥ್ವಿರಾಜ್ ಶೆಟ್ಟಿ ಸಹಕರಿಸಿದ್ದಾರೆ.