ಕುತ್ಲೂರು ಮುಡಿಗೆ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಯ ಗರಿ: ನಕ್ಸಲ್ ಪೀಡಿತ ಹಣೆಪಟ್ಟಿ ಕಳಚಿ ಸಾಹಸಮಯ ಪ್ರವಾಸಿ ತಾಣವೆಂಬ ಹೆಗ್ಗಳಿಕೆಯತ್ತ ಗ್ರಾಮ

0

ಬೆಳ್ತಂಗಡಿ: ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಏರ್ಪಡಿಸಿದ್ದ ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ ಸ್ಪರ್ಧೆ -೨೦೨೪ರ ಸಾಹಸಮಯ ಪ್ರವಾಸಿ ತಾಣ (ಅಡ್ವೆಂಚರ್ ಟೂರಿಸಂ) ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಲೂರು ಗ್ರಾಮಕ್ಕೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಈ ಪ್ರಶಸ್ತಿ ಪಡೆದಿರುವ ಏಕೈಕ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೆ.೨೭ರಂದು ನವದೆಹಲಿಯ ವಿeನ ಭವನದಲ್ಲಿ ನಡೆದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭಾಗವಹಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಹಂತಕ್ಕೆ ತಲುಪಲು ಶ್ರಮಿಸಿದ ಕುತ್ಲೂರಿನ ಹರೀಶ್ ಡಾಕಯ್ಯ ಪೂಜಾರಿ, ಶಿವರಾಜ್ ಅಂಚನ್ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಪ್ರಶಸ್ತಿ ಸ್ವೀಕರಿಸಿದರು.
ಕೇಂದ್ರ ನಾಗರಿಕ ವಿಮಾನ ಯಾನ ರಾಜ್ಯ ಸಚಿವ ರಾಮ್ ಮೋಹನ್ ನಾಯ್ಡು, ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಸಚಿವ ಸುರೇಶ್ ಗೋಪಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆಯು ಆಯೋಜಿಸಿದ್ದ ವಿವಿಧ ಎಂಟು ವಿಭಾಗಗಳಲ್ಲಿ ಆಯ್ಕೆಯಾದ ಗ್ರಾಮಗಳಿಗೆ ಪ್ರಮಾಣಪತ್ರಗಳೊಂದಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಗ್ರಾಮದ ಯುವಕರ
ಶ್ರಮದ ಫಲ:
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಗ್ರಾಮದ ಹರೀಶ್ ಡಾಕಯ್ಯ ಪೂಜಾರಿ ಹಾಗೂ ಕತಾರ್ ಉದ್ಯೋಗಿ ಸಂದೀಪ್ ಕುತ್ಲೂರು ಈ ಸಾಧನೆಯ ಹಿಂದಿನ ರೂವಾರಿಗಳು. ಶಿವರಾಜ್ ಅಂಚನ್ ಎಂಬುವವರೂ ಸಹಕರಿಸಿzರೆ. ಕುತ್ಲೂರು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಈ ಮೂವರು ಸೇರಿಕೊಂಡು ಗ್ರಾಮದ ಪ್ರವಾಸೋದ್ಯಮ ಅವಕಾಶಗಳ ಕುರಿತು ಸಮಗ್ರ ವಿವರಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು. ಸುದೀರ್ಘವಾದ ಈ ಪ್ರಕ್ರಿಯೆಯು ವಿಡಿಯೋ, ಫೋಟೋ, ಪಿಪಿಟಿ ಸಹಿತ ಹಲವು ಸುತ್ತುಗಳನ್ನು ಒಳಗೊಂಡಿತ್ತು. ಆನ್‌ಲೈನ್ ಮೂಲಕವೇ ಎಲ್ಲ ಪ್ರಕ್ರಿಯೆಗಳು ನಡೆದಿದ್ದವು.
ಅರ್ಬಿ ಜಲಪಾತ ಸಹಿತ ಸುಂದರ ಗ್ರಾಮ:
ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕುತ್ಲೂರು ಗ್ರಾಮ ಪ್ರಾಕೃತಿಕ ಸೌ೦ದರ್ಯವನ್ನೇ ಹೊದ್ದು ಮಲಗಿದೆ. ಗ್ರಾಮದಲ್ಲಿ ಅರ್ಬಿ ಫಾಲ್ಸ ಎಂದು ಸ್ಥಳೀಯರು ಕರೆಯುವ ಅದ್ಭುತವಾದ ಜಲಪಾತವಿದ್ದು, ವರ್ಷದ ಏಳೆಂಟು ತಿಂಗಳು ತುಂಬಿ ಹರಿಯುತ್ತಿರುವುದನ್ನು ವೀಕ್ಷಿಸುವುದೇ ಸೊಬಗು. ಇಲ್ಲಿನ ಬೆಟ್ಟದಲ್ಲಿ ಹಲವರು ಟ್ರೆಕ್ಕಿಂಗ್ ಮಾಡುತ್ತಿದ್ದು, ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಬೆಟ್ಟದಲ್ಲಿ ಬೈಕ್‌ಗಳಲ್ಲಿ ಸಾಹಸ ಕ್ರೀಡೆಗಳೂ ನಡೆಯುತ್ತವೆ. ಪಕ್ಕದ ನದಿ ಇದ್ದು, ಫಿಶಿಂಗ್ ಮಾಡಬಹುದು.
ಕುತ್ಲೂರಿನ ೫೦ ಕಿ.ಮೀ. ಆಸುಪಾಸಿನಲ್ಲಿ ಧರ್ಮಸ್ಥಳ, ಕಾರ್ಕಳ, ಮೂಡುಬಿದಿರೆ, ಮಂಗಳೂರು ಮತ್ತಿತರ ಜನಪ್ರಿಯ ಪ್ರವಾಸಿ ತಾಣ, ಬೀಚ, ದೇವಸ್ಥಾನ, ತೀರ್ಥಕ್ಷೇತ್ರಗಳಿವೆ.
ಇವೆಲ್ಲ ಮಾಹಿತಿಯನ್ನು ಯುವಕರ ತಂಡ ಪ್ರವಾಸೋದ್ಯಮ ಇಲಾಖೆಗೆ ಅಚ್ಚುಕಟ್ಟಾಗಿ ಫೋಟೋ, ವಿಡಿಯೋ ಸಹಿತ ದಾಖಲೆಗಳಲ್ಲಿ ಒಪ್ಪಿಸಿದೆ.

ಪ್ರವಾಸೋದ್ಯಮಕ್ಕೆ ಅವಕಾಶ
ಕುತ್ಲೂರು ಗ್ರಾಮಕ್ಕೆ ಈ ಪ್ರಶಸ್ತಿ ಬಂದಿರುವುದು ಇಡೀ ಬೆಳ್ತಂಗಡಿ ತಾಲೂಕಿಗೇ ಸಂತೋಷದ ವಿಷಯ. ಸುಂದರ ಪ್ರಕೃತಿಯನ್ನು ಹೊಂದಿರುವ ಗ್ರಾಮಕ್ಕೆ ಈಗಲೂ ಪ್ರವಾಸಿಗರು ಬರುತ್ತಿzರೆ. ಮುಂದೆ ಅಭಿವೃದ್ಧಿಗೆ ಉತ್ತಮ ಅವಕಾಶಗಳಿವೆ. ನಮ್ಮದೇ ಹುಡುಗರು ಮಾಡಿರುವ ಪ್ರಯತ್ನ ಶ್ಲಾಘನೀಯವಾದುದು.
– ರಾಜವರ್ಮ ಜೈನ್, ನಾರಾವಿ ಗ್ರಾಮ ಪಂಚಾಯತ್ ಅಧ್ಯP

ಸಂಸದರಿಂದ ಅಭಿನಂದನೆ
ಪ್ರವಾಸೋದ್ಯಮ ಸಚಿವಾಲಯ ನಡೆಸಿದ ಬೆಸ್ಟ ಟೂರಿಸಂ ವಿಲೇಜ್ ಕಾಂಪಿಟೇಶನ್‌ನಲ್ಲಿ ರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಪ್ರಶಸ್ತಿಗೆ ಕರ್ನಾಟಕದ ಏಕೈಕ ಗ್ರಾಮವಾಗಿ ನಮ್ಮ ದಕ್ಷಿಣ ಕನ್ನಡದ ಬೆಳ್ತಂಗಡಿಯ ಕುತ್ಲೂರು ಭಾಜನವಾಗಿದೆ. ಇದಕ್ಕಾಗಿ ಶ್ರಮಿಸಿದ ಯುವಕರ ತಂಡಕ್ಕೆ ಹಾಗೂ ಎಲ್ಲ ಗ್ರಾಮಸ್ಥರಿಗೆ ಅಭಿನಂದನೆಗಳು.

  • ಕ್ಯಾ.ಬ್ರಿಜೇಶ್ ಚೌಟ, ದ.ಕ. ಸಂಸದ

ಬೆಳ್ತಂಗಡಿಯವರಿಗೆ ಹೆಮ್ಮೆ
ಅತ್ಯುತ್ತಮ ಪ್ರವಾಸಿ ಹಳ್ಳಿಗಳ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮವು ಅತ್ಯುತ್ತಮ ಸಾಹಸಿ ಪ್ರವಾಸಿ ತಾಣ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಬೆಳ್ತಂಗಡಿ ತಾಲೂಕಿನ ನಮ್ಮೆಲ್ಲರಿಗೂ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಈ ಆಯ್ಕೆಯ ಕಾರ್ಯದಲ್ಲಿ ಪ್ರವಾಸಿ ಸ್ಥಳವಾದ ಅರ್ಬಿ ಜಲಪಾತದ ಹಾಗೂ ಸುತ್ತಲಿನ ಅದ್ಭುತ ಪರಿಸರದ ಚಿತ್ರೀಕರಣ ನಡೆಸಿದ ಯುವಕರ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
– ಹರೀಶ್ ಪೂಂಜ, ಶಾಸಕ

ಟೂರಿಸಂ ಹಬ್ ಮಾಡಲು ಯೋಜನೆ
ಕಳೆದ ಬಾರಿ ನಾವು ರಾಜ್ಯಮಟ್ಟದವರೆಗೆ ತಲುಪಿzವು. ಈ ಬಾರಿ ಇನ್ನಷ್ಟು ಶ್ರಮವಹಿಸಿ ಪ್ರಶಸ್ತಿಯ ಹಂತಕ್ಕೆ ತಲುಪಲು ಪ್ರಯತ್ನಿಸಿzವೆ. ಈಗ ಪ್ರಶಸ್ತಿ ಲಭಿಸಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶ ದೊರೆತಂತಾಗಿದೆ. ಕುತ್ಲೂರನ್ನು ಟೂರಿಸಂ ಹಬ್ ಮಾಡಬೇಕೆಂಬ ಯೋಜನೆ ಇದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕುತ್ಲೂರು ಗ್ರಾಮಕ್ಕೆ ಅನುದಾನ ಸಿಗುವ ನಿರೀಕ್ಷೆ ಇದೆ. ಸ್ವಉದ್ಯೋಗ, ಗ್ರಾಮದ ಅಭಿವೃದ್ಧಿಗೂ ಇದರಿಂದ ನೆರವಾಗಲಿದೆ. ಪ್ರಶಸ್ತಿ ಬಂದಿರುವುದು ನಮಗೂ ಸಂತೋಷವಾಗಿದೆ. ಊರಿನಲ್ಲೂ ಸಂಭ್ರಮದ ವಾತಾವರಣವಿದೆ.

  • ಹರೀಶ್ ಡಾಕಯ್ಯ ಪೂಜಾರಿ, ಪ್ರಶಸ್ತಿಯ ರೂವಾರಿ

p>

LEAVE A REPLY

Please enter your comment!
Please enter your name here