ಪಟ್ಟೂರು: ಶ್ರೀರಾಮ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ

0

ಪಟ್ಟೂರು: ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ ವರ್ಷದ ಮೇ ತಿಂಗಳಿನಿಂದ ಸಪ್ಟೆಂಬರ್ ವರೆಗಿನ ತಿಂಗಳುಗಳಲ್ಲಿ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುವ ವಿದ್ಯಾರ್ಥಿಗಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು. ಶಾಲೆಗಳು ಶಿಕ್ಷಣದೊಂದಿಗೆ ಸಂಸ್ಕಾರ ಹಾಗೂ ಶಿಸ್ತನ್ನು ಮೂಡಿಸುವ ಶ್ರದ್ಧಾ ಕೇಂದ್ರಗಳಾಗಬೇಕು ಕೇವಲ ಮಾಹಿತಿಯನ್ನು ತುಂಬುವ ಕೇಂದ್ರಗಳಾಗಬಾರದು.ಈ ಭಾಗದಲ್ಲಿ ಶ್ರೀರಾಮ ಶಾಲೆ ಮೌಲ್ಯಯುತ ಶಿಕ್ಷಣವನ್ನು ನೀಡುವ ಕಾರ್ಯ ಮಾಡುತ್ತಿದೆ. ಎಕ್ಸೆಲ್ ವಿದ್ಯಾಸಂಸ್ಥೆಯು ಶ್ರೀರಾಮ ಶಾಲೆಯ ಜೊತೆಗಿದ್ದು ಶಾಲೆಯ ಕಾರ್ಯ ಚಟುವಟಿಕೆಗಳಿಗೆ ಹಾಗೂ ಶ್ರೀರಾಮ ಶಾಲೆಯ ಏಳಿಗೆಗೆ ಪೂರ್ಣ ಸಹಕಾರವನ್ನು ನೀಡುತ್ತದೆ ಎಂದು ಎಕ್ಸೆಲ್ ಕಾಲೇಜು ಗುರುವಾಯನಕೆರೆ ಇದರ ಮಾಲಕ ಸುಮಂತ್ ಕುಮಾರ್ ಜೈನ್ ಇವರು ಶಾಲೆಯ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರ ಮಾತನಾಡುತ್ತಾ ಹಿಂದೂ ಸಮಾಜದ ಆಚರಣೆಗಳಲ್ಲಿ ಹುಟ್ಟಿದ ದಿನವನ್ನು ಶ್ರದ್ಧಾಪೂರ್ವಕ ಹಾಗೂ ಭಾವನಾತ್ಮಕವಾಗಿ ಮತ್ತು ಧಾರ್ಮಿಕ ನೆಲೆಗಟ್ಟಿನಲ್ಲಿ ಆಚರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪರಿಪಾಠ ಇಂದಿನ ನಮ್ಮ ಪಾಶ್ಚ್ಯತ್ಯ ಸಂಸ್ಕೃತಿಗೆ ಮಾರುಹೋಗಿ ಕೆಲವು ಅರ್ಥವಿಲ್ಲದ ಆಚರಣೆಗಳನ್ನು ನಾವು ರೂಡಿಸಿಕೊಂಡಿದ್ದೇವೆ. ಹುಟ್ಟಿದ ದಿನದಂದು ಉಳಿಸಿದ ದೀಪವನ್ನು ಆರಿಸುವುದು ಚಾಕು ಬಳಸಿ ತಿನಿಸುಗಳನ್ನು ಕತ್ತರಿಸುವುದು ಇವೆಲ್ಲವೂ ನಮ್ಮ ಆಚರಣೆಗಳಲ್ಲ ಹುಟ್ಟಿದ ದಿನದಂದು ದೀಪವನ್ನು ಬೆಳಗಿಸಬೇಕು ಮನೆಯಲ್ಲಿ ಸಿಹಿಯನ್ನು ತಯಾರಿಸಿ ಹುಟ್ಟಿದ ದಿನವನ್ನು ಆಚರಿಸುವ ಮಕ್ಕಳ ಬಾಯಿ ಸಿಹಿ ಮಾಡಬೇಕು ದೇವಸ್ಥಾನಗಳಿಗೆ ಹೋಗಿ ಪೂಜೆ ಸೇವೆಗಳನ್ನು ಮಾಡಿಸಬೇಕು.. ಆ ದಿನ ಅತ್ಯಂತ ವಿಶೇಷವಾಗಿರುವುದರಿಂದ ಸಮಾಜಕ್ಕೆ ತನ್ನದೇನಾದರೂ ಕಾಣಿಕೆ ನೀಡುವ ಮೂಲಕ ಸಮರ್ಪಣಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹಿಂದೂ ಸಮಾಜ ತನ್ನ ಮೌಲ್ಯದ ಆಚಾರ ಪದ್ಧತಿಗಳನ್ನು ಬದಿಗಿಟ್ಟು ಮೌಲ್ಯಗಳೇ ಇಲ್ಲದ ಆಚರಣೆಗಳನ್ನು ರೂಡಿಸಿಕೊಂಡಿರುವುದು ತುಂಬಾ ವಿಷಾದನೀಯ ಇವತ್ತು ಈ ಕಾರ್ಯಕ್ರಮದಲ್ಲಿ ಆಗಮಿಸಿದ ಎಲ್ಲ ಪೋಷಕರು ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ಹುಟ್ಟಿದ ದಿನವನ್ನು ಆಚರಿಸುವಾಗ ಇವುಗಳನ್ನು ಗಮನಿಸಬೇಕು ಅರ್ಥಪೂರ್ಣವಾಗಿ ಆಚರಿಸಬೇಕು. ನಿಜವಾದ ಹಿಂದೂ ಆಚರಣೆ ಪದ್ಧತಿಗಳನ್ನು ಮನೆಗಳಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಶಾಲೆಯ ಮಾತೃ ಭಾರತಿಯ ತಾಯಂದಿರು ಹಾಗೂ ಶಾಲಾ ಶಿಕ್ಷಕರು ಆರತಿ ಬೆಳಗಿ ಅಕ್ಷತೆ ಸಿಹಿಯನ್ನು ನೀಡಿದರು. ಹಿರಿಯರಿಂದ ತಿಲಕ ಧಾರಣೆ ಮಾಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಆಶೀರ್ವಾದ ಪಡೆದರು.

ಕಾರ್ಯಕ್ರಮದಲ್ಲಿ ರಾಘವೇಂದ್ರ ಉಪಾಧ್ಯಾಯ ಕೃಷಿಕರು ಹಾಗೂ ಅರ್ಚಕರು, ವೆಂಕಟರಮರಣ ರಾವ್ ಮಂಕುಡೆ ಸಂಚಾಲಕರು ಸರಸ್ವತಿ ವಿದ್ಯಾಲಯ ಕಡಬ, ಕೃಷ್ಣ ಭಟ್ ಹಿತ್ತಿಲು ಅಧ್ಯಕ್ಷರು ಸೌತಡ್ಕ ಶ್ರೀ ಮಹಾಗಣಪತಿ ಟ್ರಸ್ಟ್ ಬಾಲಕೃಷ್ಣ ಕೆ. ನೈಮಿಷ ಮಾಲಕರು ನೈಮಿಷ ಹೌಸ್ ಆಫ್ ಸ್ಪೈಸಿಸ್ ಹಾಗೂ ಅಧ್ಯಕ್ಷರು ಶ್ರೀರಾಮ ಶಾಲೆ ನೂತನ ಕಟ್ಟಡ ನಿರ್ಮಾಣ ಸಮಿತಿ, ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಾಲಾ ಮಾತೃ ಭಾರತಿ ಸದಸ್ಯರು, ಶಾಲಾ ಪೋಷಕರು ಉಪಸ್ಥಿತರಿದ್ದರು.ವಿದ್ಯಾಸಂಸ್ಥೆ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಂಸ್ಥೆಯ ಕೋಶಾಧಿಕಾರಿಗಳಾದ ಗಣೇಶ್ ಕೆ. ವಂದಿಸಿದರು. ಶಾಲಾ ಶಿಕ್ಷಕಿ ರಕ್ಷಿತಾ ಎ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here