ಕಣಿಯೂರು: ಗ್ರಾಮ ಪಂಚಾಯತಿಯಲ್ಲಿ ಗಾಂಧಿ ಜಯಂತಿ ಆಚರಣೆ

0

ಕಣಿಯೂರು: ಕಣಿಯೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗಾಂಧಿ ಜಯಂತಿ ದಿನಾಚರಣೆ ಕಾರ್ಯಕ್ರಮವನ್ನು ಅ.2ರಂದು ಹಮ್ಮಿಕೊಳ್ಳಲಾಯಿತು ಹಾಗೂ ಗಾಂಧಿ ಜಯಂತಿ ಮತ್ತು ಸ್ವಚ್ಛತಾ ಹೀ ಸೇವಾ ಪ್ರತಿಜ್ಞಾವಿಧಿ ಬೋಧನೆ ಮತ್ತು ಸ್ವಚ್ಛತಾ ಕಾರ್ಯಕ್ರಮ ಹಾಗೂ ಸ್ವಚ್ಛತೆಯೇ ಸೇವಾ ಆಂದೋಲನ ಕಾರ್ಯಕ್ರಮದಡಿಯಲ್ಲಿ ಕಸ ವಿಲೇಯವರಿಗೆ ಚಾಲನೆ ನೀಡಲಾಯಿತು.

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 2025-26ನೇ ಸಾಲಿನ ಕಾಮಗಾರಿಗಳ ಅರ್ಜಿಸಲ್ಲಿಸುವ ಕುರಿತು ತಿಳಿಸಲಾಯಿತು.ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗಾಯತ್ರಿ, ಗ್ರಾಮ ಪಂಚಾಯತ್ ಸದಸ್ಯೆ ಸುಮತಿ ಬೆಂಗಾಯಿ, ಸಂಜೀವಿನಿ ಒಕ್ಕೂಟ ಎಂ.ಬಿ.ಕೆ. ರತ್ನಾವತಿ, ಯಲ್.ಸಿ.ಆರ್.ಪಿ.ಲೋಕಮ್ಮ, ಗ್ರಾಮ ಪಂಚಾಯತ್ ಸಿಬ್ಬಂದಿ ಪ್ರದೀಪ್ ನಾಯ್ಕ, ಉಮೇಶ್ ನಾಯ್ಕ, ಲಕ್ಷ್ಮೀ,ವಿ.ಆರ್.ಡಬ್ಲು, ಚಿರಂಜೀವಿ ಶೆಟ್ಟಿ, ಸುನಂದ ಹಾಜರಿದ್ದರು.

LEAVE A REPLY

Please enter your comment!
Please enter your name here