ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಂದಾರಿನ ಕಲ್ಲಿಮಾರು ನಿವಾಸಿ ಹರಿಶ್ಚಂದ್ರರಿಗೆ ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯಿಂದ ಸಹಾಯಧನ ಹಸ್ತಾಂತರ

0

ಬಂದಾರು: ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಂದಾರು ಗ್ರಾಮದ ಕಲ್ಲಿಮಾರು ನಿವಾಸಿ ಹರಿಶ್ಚಂದ್ರ ಇವರಿಗೆ ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯಿಂದ ರೂ.20,000/-ದ ಚೆಕ್ಕನ್ನು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಮಂಗಳೂರು ಇವರ ಮೂಲಕ ಫಲಾನುಭವಿಯ ಮನೆಯವರಿಗೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗೌರವಾಧ್ಯಕ್ಷ ಪದ್ಮ ಗೌಡ ಬೆಳಾಲು, ಕಾರ್ಯದರ್ಶಿ ಗಣೇಶ್ ಗೌಡ, ಕೋಶಾಧಿಕಾರಿ ಯುವರಾಜ ಅನಾರು, ಉಪಾಧ್ಯಕ್ಷರುಗಳಾದ ನಾರಾಯಣ ಗೌಡ ದೇವಸ್ಯ ಮತ್ತು ಧರ್ಣಪ್ಪ ಗೌಡ ಬಾನಡ್ಕ, ಜತೆ ಕಾರ್ಯದರ್ಶಿ ಶ್ರೀನಾಥ ನಡ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ದೇವಸ ಸವಣಾಲು, ತಾಲೂಕು ಸಂಘದ ನಿರ್ದೇಶಕರುಗಳು, ಜಿಲ್ಲಾ ಮಾತೃ ಸಂಘದ ಸದಸ್ಯ ಗಣೇಶ್ ಗೌಡ ಕಲಾಯಿ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಕಾರ್ಯದರ್ಶಿ ಸುರೇಶ್ ಕೌಡಂಗೆ, ಸ್ಪಂದನಾ ಸೇವಾ ಸಂಘದ ಸಂಚಾಲಕ ಮೋಹನ ಗೌಡ ಕೊಯ್ಯೂರು, ಯುವ ವೇದಿಕೆಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವೇದಿಕೆಯ ಪದಾಧಿಕಾರಿಗಳು, ಸ್ಪಂದನಾ ಸೇವಾ ಸಂಘದ ಸದಸ್ಯರುಗಳು ಹಾಗೂ ಗ್ರಾಮ ಸಮಿತಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here